ADVERTISEMENT

ಅಕ್ರಮ ಸಂಬಂಧ: ಪತ್ನಿಗೆ ಚಾಕು ಇರಿದಿದ್ದ 91ರ ವೃದ್ಧನಿಗೆ ಜಾಮೀನು 

ಅಕ್ರಮ ಸಂಬಂಧದ ಆರೋಪ ಹೊರೆಸಿದ್ದಕ್ಕೆ ಕೋ‍ಪಗೊಂಡು ಚಾಕು ಇರಿದಿದ್ದ ವೃದ್ಧ

ಪಿಟಿಐ
Published 15 ಏಪ್ರಿಲ್ 2025, 15:35 IST
Last Updated 15 ಏಪ್ರಿಲ್ 2025, 15:35 IST
<div class="paragraphs"><p>ಚಾಕು</p></div>

ಚಾಕು

   

(ಸಾಂದರ್ಭಿಕ ಚಿತ್ರ)

ತಿರುವನಂತಪುರ: ತನ್ನ ವಿರುದ್ಧ ಅಕ್ರಮ ಸಂಬಂಧದ ಆರೋಪ ಹೊರೆಸಿದ್ದಕ್ಕೆ ಕೋ‍ಪಗೊಂಡು, 88ರ ವಯಸ್ಸಿನ ಪತ್ನಿಗೆ ಚಾಕುವಿನಿಂದ ಇರಿದಿದ್ದ 91 ವರ್ಷದ ವೃದ್ಧನಿಗೆ ಕೇರಳ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ADVERTISEMENT

ಕೇರಳದ ಕೊಚ್ಚಿ ಮೂಲದ ಥೀವನ್‌ (91) ಅನ್ಯ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆಂದು ಅವರ ಪತ್ನಿ ಕುಂಜಲಿ (88) ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದಂಪತಿ ನಡುವೆ ಸಂಘರ್ಷ ಉಂಟಾಗಿ ಮಾ.21ರಂದು ಕುಂಜಲಿಗೆ ಪತಿ ಚಾಕುವಿನಿಂದ ಇರಿದಿದ್ದರು. ಅಂದೇ ಅವರನ್ನು ಬಂಧಿಸಲಾಗಿತ್ತು. 

ಜಾಮೀನು ಕೋರಿ ಥೀವನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ.ಕುನ್ಹಿಕೃಷ್ಣನ್‌ ಅವರು, ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ತದ್ವಿರುದ್ಧ ಗುಣವಿರುವ ದಂಪತಿ ಒಬ್ಬರ ನಿಲುವನ್ನು ಮತ್ತೊಬ್ಬರು ಅರಿತು, ಅವುಗಳನ್ನು ಗೌರವಿಸುತ್ತಾ ಜೊತೆಗೆ ಸಾಗುವುದೇ ಸುಖ ದಾಂಪತ್ಯ ಎಂದೂ ನ್ಯಾಯಾಲಯ ಹೇಳಿದೆ. 

91ರ ಇಳಿ ವಯಸ್ಸಿನಲ್ಲಿ ತನಗಿರುವ ಏಕೈಕ ಶಕ್ತಿ ಕುಂಜಲಿ ಎಂಬುದನ್ನು ಥೀವನ್‌ ತಿಳಿದುಕೊಳ್ಳಬೇಕು. ಕುಂಜಲಿ ಕೂಡ ವೃದ್ಧಾಪ್ಯದಲ್ಲಿ ತನಗಿರುವ ಆಧಾರ ಥೀವನ್‌ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಅವರು ಇದೇ ವೇಳೆ ಕಿವಿ ಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.