ADVERTISEMENT

ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 3 ಮೇ 2025, 15:43 IST
Last Updated 3 ಮೇ 2025, 15:43 IST
   

ಚೆನ್ನೈ: ಏಷ್ಯನ್‌ ಕಾಲೇಜ್‌ ಆಫ್‌ ಜರ್ನಲಿಸಂ ನೀಡುವ ಎಸಿಜೆ ಪತ್ರಿಕೋದ್ಯಮ ಪ್ರಶಸ್ತಿಯನ್ನು ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿವಾರ ಘೋಷಿಸಲಾಯಿತು.

ಹೇಮಂತ್‌ ಗೈರೋಲಾ ಅವರು, ತನಿಖಾ ಪತ್ರಿಕೋದ್ಯಮ ವಿಭಾಗದಲ್ಲಿ ಏಷ್ಯನ್ ಕಾಲೇಜ್‌ ಆಫ್ ಜರ್ನಲಿಸಂ–2024 ಪ್ರಶಸ್ತಿಗೆ ಭಾಜನರಾಗಿದ್ದಾರೆ.  

ಸಾಮಾಜಿಕ ಪರಿಣಾಮ ಪತ್ರಿಕೋದ್ಯಮ ವಿಭಾಗದಲ್ಲಿ ನೀಡಲಾಗುವ ‘ಕೆ.ಪಿ. ನಾರಾಯಣ ಕುಮಾರ್ ಸ್ಮಾರಕ ಪ್ರಶಸ್ತಿ’ಯು ವಂದನಾ ಮೆನನ್‌ ಮತ್ತು ಶಂಶೀರ್‌ ಯೂಸಫ್‌, ಮೋನಿಕಾ ಝಾ, ಶ್ರೀರಾಮ್‌ ವಿಠ್ಠಲಮೂರ್ತಿ ಅವರಿಗೆ ಜಂಟಿಯಾಗಿ ಸಂದಿದೆ.

ADVERTISEMENT

‘ಆಶಿಶ್‌ ಯೆಚೂರಿ ಸ್ಮಾರಕ ಪ್ರಶಸ್ತಿ’ಯು ಛಾಯಾಚಿತ್ರ ಪತ್ರಕರ್ತ ಪಳನಿಕುಮಾರ್ ಎಂ. ಅವರಿಗೆ ಸಂದಿದೆ. 

ತನಿಖಾ ಪತ್ರಿಕೋದ್ಯಮ ಪ್ರಶಸ್ತಿಗೆ ₹2 ಲಕ್ಷ, ಸಾಮಾಜಿಕ ಪರಿಣಾಮ ಪ್ರಶಸ್ತಿ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ಫಲಕದೊಂದಿಗೆ ₹1 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.