ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯು ದಕ್ಷಿಣ ದೆಹಲಿಯಲ್ಲಿ ಇರುವ ಲಾಲಾ ಲಜಪತ್ ರಾಯ್ ಮಾರ್ಗದ ಒಂದು ಭಾಗದ ರಸ್ತೆಗೆ ಬೋಡೊ ಸಮುದಾಯದ ನೇತಾರ ‘ಬೋಡೊಫಾ’ ಉಪೇಂದ್ರನಾಥ ಬ್ರಹ್ಮ ಅವರ ಹೆಸರನ್ನು ಮರುನಾಮಕರಣ ಮಾಡಿದೆ.
ಈ ರಸ್ತೆಯು ಕೈಲಾಶ್ ಕಾಲೊನಿಯ ಮೆಟ್ರೊ ನಿಲ್ದಾಣ ಬಳಿಯಿಂದ ಬೋಡೊಲ್ಯಾಂಡ್ ಅತಿಥಿ ಗೃಹದವರೆಗೆ ವಿಸ್ತರಿಸಿದೆ.
ಉಪೇಂದ್ರ ನಾಥ ಅವರನ್ನು ‘ಬೋಡೊಫಾ’ ಎಂದು ಕರೆಯಲಾಗುತ್ತದೆ. ಬೋಡೊಗಳ ರಕ್ಷಕ ಎಂಬುದು ಇದರರ್ಥ. ಅವರು ಆಲ್ ಬೋಡೊ ಸ್ಟೂಡೆಂಟ್ಸ್ ಯೂನಿಯನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಸಮುದಾಯದ ಶಿಕ್ಷಣ ಮತ್ತು ಅಭಿವೃದ್ಧಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದು ಅವರ ಹೆಗ್ಗಳಿಕೆ.
ಮೇ 1ರಂದು ಕೈಲಾಸ್ ಕಾಲೊನಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮರುನಾಮಕರಣಗೊಂಡಿರುವ ರಸ್ತೆ ಹಾಗೂ ಉಪೇಂದ್ರನಾಥ ಅವರ ಪ್ರತಿಮೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣ ಮಾಡಲಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ, ಬೋಡೊಲ್ಯಾಂಡ್ ಪ್ರಾದೇಶಿಕ ಮಂಡಳಿಯ ಕಾರ್ಯ ನಿರ್ವಾಹಕ ಸದಸ್ಯ ಪ್ರಮೋದ್ ಬೋರೊ, ದೆಹಲಿ ಮಹಾನಗರ ಪಾಲಿಕೆಯ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಉಪೇಂದ್ರನಾಥ ಬ್ರಹ್ಮ ಅವರ 35ನೇ ವರ್ಷ ಸಂಸ್ಮರಣೆ ಅಂಗವಾಗಿ ಅಸ್ಸಾಂ ಸರ್ಕಾರವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.