ADVERTISEMENT

ಅಂಡಮಾನ್‌: 3 ದ್ವೀಪಗಳ ಮರು ನಾಮಕರಣ

ಪಿಟಿಐ
Published 31 ಡಿಸೆಂಬರ್ 2018, 9:36 IST
Last Updated 31 ಡಿಸೆಂಬರ್ 2018, 9:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೋರ್ಟ್‌ಬ್ಲೇರ್‌ : ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಗೌರವಾರ್ಥ ಮೋದಿ ಅವರು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ ಸಮೂಹದ ಮೂರು ದ್ವೀಪಗಳನ್ನು ಮರು ನಾಮಕರಣ ಮಾಡಿದರು.

ರಾಸ್‌ ದ್ವೀಪವನ್ನು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ದ್ವೀಪ್‌ ಎಂದು, ನೇಲ್‌ ದ್ವೀಪವನ್ನು ಶಹೀದ್‌ ದ್ವೀಪವೆಂದು ಹಾಗೂ ಹ್ಯಾವೆಲಾಕ್‌ ದ್ವೀಪವನ್ನು ಸ್ವರಾಜ್‌ ದ್ವೀಪ ಎಂದು ನಾಮಕರಣ ಮಾಡಲಾಯಿತು.‌

ಈ ಮೂರೂ ದ್ವೀಪಗಳು ಪ್ರಮುಖ ಪ್ರವಾಸಿ ತಾಣಗಳಾಗಿವೆ.

ADVERTISEMENT

ಇದಕ್ಕೂ ಮೊದಲು ಪ್ರಧಾನಿ ಅವರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು ಅಲ್ಲದೆ ಇಂಧನ, ಸಂಪರ್ಕ, ಶಿಕ್ಷಣ, ಪ್ರವಾಸೋದ್ಯಮ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಬೋಸ್‌ ಅವರು ಇಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ ಸಂದರ್ಭದ 75ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮೋದಿ ಮಾತನಾಡಿದರು. ನೇತಾಜಿ ಕ್ರೀಡಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.