ADVERTISEMENT

ಪಾಕ್‌ ಗುಂಡಿನ ದಾಳಿ: ಭಾರತದ ಯೋಧ ಹುತಾತ್ಮ

ಪಿಟಿಐ
Published 24 ಮಾರ್ಚ್ 2019, 17:30 IST
Last Updated 24 ಮಾರ್ಚ್ 2019, 17:30 IST
   

ಜಮ್ಮು: ಪೂಂಚ್‌ ಜಿಲ್ಲೆಯ ಶಾಹಪುರ್‌ ಮತ್ತು ಕೇರ್ಣಿ ಪ್ರದೇಶದ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತದ ಯೋಧರೊಬ್ಬರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.

ಶನಿವಾರ ಸಂಜೆ 5.30ಕ್ಕೆ ಗುಂಡಿನ ದಾಳಿ ಆರಂಭಿಸಿದ ಪಾಕಿಸ್ತಾನದ ಪಡೆಗಳಿಗೆ ಭಾರತದ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ.ಭಾನುವಾರದ ಬೆಳಗಿನವರೆಗೂ ಗುಂಡಿನ ದಾಳಿ ನಡೆದಿದೆ.

ಪಾಕಿಸ್ತಾನದ ಕಡೆಗೆ ಸಂಭವಿಸಿದ ಸಾವು ನೋವಿನ ಮಾಹಿತಿ ತಕ್ಷಣಕ್ಕೆ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬೆಳಗಿನ 4 ಗಂಟೆ ಸುಮಾರಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಯೋಧರೊಬ್ಬರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.