ADVERTISEMENT

ಅರುಣಾಚಲ ಪ್ರದೇಶ: ಟ್ರಕ್ ಕಂದಕಕ್ಕೆ ಉರುಳಿ ಯೋಧ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ

ಪಿಟಿಐ
Published 14 ಜುಲೈ 2021, 13:19 IST
Last Updated 14 ಜುಲೈ 2021, 13:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಟಾನಗರ: ಅರುಣಾಚಲ ಪ್ರದೇಶದ ಸಿಯಾಂಗ್ ಜಿಲ್ಲೆಯಲ್ಲಿ ಬುಧವಾರ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ಕಂದಕಕ್ಕೆ ಉರುಳಿದ ಪರಿಣಾಮವಾಗಿ ಓರ್ವ ಯೋಧ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

11 ಸೇನಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ಟ್ರಕ್, ಮಿಗ್ಗಿಂಗ್‌ನಿಂದ ಜಿಲ್ಲೆಯ ಟ್ಯೂಟಿಂಗ್ ಸೇನಾ ಶಿಬಿರಕ್ಕೆ ತೆರಳುವಾಗ ಅವಘಡ ಸಂಭವಿಸಿದೆ.

ಬೆಳಗ್ಗೆ 7.30ರ ಸುಮಾರಿಗೆ ಪ್ಯಾಂಗೊ ಹಾಗೂ ಟ್ಯೂಟಿಂಗ್ ನಡುವೆ ಕಣಿವೆ ರಸ್ತೆಯಲ್ಲಿ ಟ್ರಕ್ ಕಂದಕಕ್ಕೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ಕನೇ ಸಿಖ್ ಲೈಟ್ ಕಾವಲುಪಡೆ ರೆಜಿಮೆಂಟ್‌ನ ಯೋಧ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸೇನೆಯ ಹೆಲಿಕಾಪ್ಟರ್ ಬಳಸಿ ರಕ್ಷಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.