ADVERTISEMENT

ಬದರಿನಾಥ ದೇಗುಲ ದರ್ಶನ ಆರಂಭ

ಪಿಟಿಐ
Published 10 ಮೇ 2019, 16:55 IST
Last Updated 10 ಮೇ 2019, 16:55 IST

ಗೋಪೇಶ್ವರ: ಚಳಿಗಾಲದ ವಿರಾಮದ ನಂತರ ಹಿಮಾಲಯ ಶ್ರೇಣಿಯ ಪ್ರಮುಖ ದೇವಾಲಯ ಬದರಿನಾಥದ ಬಾಗಿಲನ್ನು ಶುಕ್ರವಾರ ತೆರೆಯಲಾಗಿದ್ದು, ದರ್ಶನಕ್ಕೆ ಮುಕ್ತವಾಗಿದೆ.

ವೇದ ಮಂತ್ರಗಳ ಉದ್ಘೋಷದೊಂದಿಗೆ ಮುಂಜಾನೆ 4.15ಕ್ಕೆ ದೇಗುಲದ ಮುಖ್ಯ ಅರ್ಚಕ ಈಶ್ವರಿ ಪ್ರಸಾದ್‌ ನಂಬೂದರಿ ಅವರು ಬಾಗಿಲನ್ನು ತೆರೆದರು. ಸಾವಿರಾರು ಭಕ್ತರು ಈ ಕ್ಷಣಕ್ಕೆ ಸಾಕ್ಷಿಯಾದರು.

ಹಿಮಾಲಯದಲ್ಲಿನ ಅತ್ಯಂತ ಎತ್ತರದ ಗುಡಿ ಬದರಿನಾಥದ ದರ್ಶನಕ್ಕೆ 10 ಸಾವಿರಕ್ಕೂ ಅಧಿಕ ಭಕ್ತರು ಬಂದಿದ್ದರು. ಉತ್ತರಾಖಂಡದ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಹಾಗೂ ಮಾಜಿ ಮುಖ್ಯಮಂತ್ರಿ ರಮೇಶ್‌ ಪೊಖ್ರಿಯಲ್‌ ನಿಶಾಂಕ್ ಉಪಸ್ಥಿತರಿದ್ದರುಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.