ADVERTISEMENT

ಕಾಂಗ್ರೆಸ್-ನೆಹರೂ ಅವರನ್ನು ನಿಂದಿಸಲು ಬಯಸಿದರೆ ನನ್ನ ಅತಿಥಿಯಾಗಿರಿ: ರಾಹುಲ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 2:15 IST
Last Updated 9 ಫೆಬ್ರುವರಿ 2022, 2:15 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ನೀವು ಕಾಂಗ್ರೆಸ್ ಹಾಗೂ ಜವಾಹರಲಾಲ್ ನೆಹರೂ ಅವರನ್ನು ನಿಂದಿಸಲು ಬಯಸಿದರೆ ನನ್ನ ಅತಿಥಿಯಾಗಿರಿ. ಆದರೆ ನಿಮ್ಮ ಕರ್ತವ್ಯವನ್ನು ನಿಭಾಯಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.

ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಂದ ನುಣುಚಿಕೊಂಡಿರುವ ಪ್ರಧಾನಿ, ಕಾಂಗ್ರೆಸ್ ಹಾಗೂ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏಕೆಂದರೆಕಾಂಗ್ರೆಸ್ ಪಕ್ಷವು ಸತ್ಯವನ್ನು ಹೇಳುತ್ತಿದೆ ಎಂದು ಬಿಜೆಪಿ ಭಯಪಟ್ಟುಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

'ನನ್ನ ತಾತ ಈ ದೇಶಕ್ಕೆ ಸೇವೆಯನ್ನು ಸಲ್ಲಿಸಿದ್ದಾರೆ. ಅವರು ದೇಶಕ್ಕಾಗಿ ತಮ್ಮ ಇಡೀ ಜೀವನವನ್ನು ಅರ್ಪಿಸಿದರು. ಹಾಗಾಗಿ ಸರ್ಟಿಫಿಕೇಟ್ ಅಗತ್ಯವಿಲ್ಲ. ಅವರು ಏನೂ ಮಾಡಬೇಕು, ಏನು ಮಾಡಿದರು ಎಂಬುದರ ಬಗ್ಗೆ ಯಾರ ಹೇಳಿಕೆಯನ್ನು ನಾನು ಕೇರ್ ಮಾಡಲ್ಲ'ಎಂದು ತಿಳಿಸಿದರು.

'ಕಾಂಗ್ರೆಸ್ ಸತ್ಯವನ್ನು ನುಡಿಯುತ್ತಿದೆ ಎಂಬ ಭಯ ಮೋದಿ ಹಾಗೂ ಬಿಜೆಪಿಗಿದೆ. ಅವರ ಭಾಷಣವು ಕಾಂಗ್ರೆಸ್ ಅಥವಾ ಜವಾಹರಲಾಲ್ ನೆಹರೂ ಏನೂ ಮಾಡಲಿಲ್ಲ ಎಂಬುದರ ಕುರಿತು ಆಗಿತ್ತು. ಬಿಜೆಪಿ ನೀಡಿರುವ ಭರವಸೆಗಳ ಬಗ್ಗೆ ಪ್ರಧಾನಿ ಒಂದು ಮಾತನ್ನೂ ಆಡಿಲ್ಲ' ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಏನೂ ಮಾಡುತ್ತಿದ್ದಾರೆ ಎಂಬುದನ್ನು ದೇಶದ ಪ್ರತಿಯೊಬ್ಬ ನಾಗರಿಕರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.