ADVERTISEMENT

ಆಂಧ್ರ: ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇ 75 ಮೀಸಲಾತಿ

ಮಸೂದೆಗೆ ಆಂಧ್ರಪ್ರದೇಶ ವಿಧಾನಸಭೆ ಅನುಮೋದನೆ: ದೇಶದಲ್ಲೇ ಮೊದಲು

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 19:40 IST
Last Updated 23 ಜುಲೈ 2019, 19:40 IST
ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ
ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ   

ಅಮರಾವತಿ: ಖಾಸಗಿ ಉದ್ಯಮಗಳಲ್ಲಿ ಶೇಕಡ 75ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಮೀಸಲಿಡುವ ಮಸೂದೆಗೆಆಂಧ್ರಪ್ರದೇಶ ವಿಧಾನಸಭೆ ಅನುಮೋದನೆ ನೀಡಿದೆ.

ಎಲ್ಲ ಉದ್ಯಮಗಳು, ಕಾರ್ಖಾನೆಗಳು, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಗಳಲ್ಲಿ ಸ್ಥಳೀಯರಿಗೆ ಈ ಮೀಸಲಾತಿ ಅನ್ವಯಿಸಲಿದೆ. ಇಂತಹ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿಗೆ ರೂಪಿಸಿದ ರಾಜ್ಯ ಆಂಧ್ರಪ್ರದೇಶವಾಗಿದೆ.

ಈ ಸಂಬಂಧ ರೂಪಿಸಿರುವ ’ಉದ್ಯಮಗಳು ಮತ್ತು ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಾಯ್ದೆ– 2019’ಕ್ಕೆ ವಿಧಾನಸಭೆ ಅನುಮೋದನೆ ನೀಡಿದೆ.ರಾಜ್ಯದಲ್ಲಿ ಈಗಿರುವ ಉದ್ಯಮಗಳಿಗೆ ಮಾತ್ರವಲ್ಲದೇ ಈ ಕಾಯ್ದೆ ಜಾರಿಯಾದ ಬಳಿಕ ಸ್ಥಾಪನೆಯಾಗುವ ಘಟಕಗಳಿಗೂ ಅನ್ವಯವಾಗಲಿದೆ.

ADVERTISEMENT

ಕಾಯ್ದೆಯ ಪ್ರಮುಖ ಅಂಶ: ಒಂದು ವೇಳೆ ಕೌಶಲ ಹೊಂದಿದ ಸ್ಥಳೀಯರು ಲಭ್ಯವಾಗದಿದ್ದರೆ ಸರ್ಕಾರದ ಸಹಭಾಗಿತ್ವದಲ್ಲಿ ಉದ್ಯಮಗಳು ತರಬೇತಿ ನೀಡಿ ಉದ್ಯೋಗ ಕಲ್ಪಿಸಬೇಕು.ಅಲ್ಲದೆ ಕಂಪನಿಗಳು ಕಾಯ್ದೆಯನ್ನು ಪಾಲಿಸಿರುವ ಬಗ್ಗೆ ತ್ರೈಮಾಸಿಕ ವರದಿ ನೀಡಬೇಕು.ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಸ್ಥಳೀಯ ಯುವಕರನ್ನು ಸಜ್ಜುಗೊಳಿಸಲು ತರಬೇತಿ ಕೇಂದ್ರಗಳನ್ನು ಸರ್ಕಾರ ಆರಂಭಿಸಲಿದೆ ಎಂದು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.

**

ಇಂತಹ ಕಾಯ್ದೆ ಅಗತ್ಯವಾಗಿತ್ತು. ಆಂಧ್ರಪ್ರದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ಸಾವಿರಾರು ಯುವಕರ ಬದುಕಿಗೆ ಅನುಕೂಲವಾಗಲಿದೆ
- ಎಪಿಕೆ ರೆಡ್ಡಿ,ಎಫ್‌ಎಸ್‌ಎಂಇ ರಾಷ್ಟ್ರೀಯ ಅಧ್ಯಕ್ಷ

**

ಕಾಯ್ದೆಯ ಪ್ರಮುಖ ಅಂಶಗಳು

* ಒಂದು ವೇಳೆ ಕೌಶಲ ಹೊಂದಿದ ಸ್ಥಳೀಯರು ಲಭ್ಯವಾಗದಿದ್ದರೆ ಸರ್ಕಾರದ ಸಹಭಾಗಿತ್ವದಲ್ಲಿ ಉದ್ಯಮಗಳು ತರಬೇತಿ ನೀಡಿ ಉದ್ಯೋಗ ಕಲ್ಪಿಸಬೇಕು.

* ಕಂಪನಿಗಳು ಕಾಯ್ದೆಯನ್ನು ಪಾಲಿಸಿರುವ ಬಗ್ಗೆ ತ್ರೈಮಾಸಿಕ ವರದಿ ನೀಡಬೇಕು.

* ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಸ್ಥಳೀಯ ಯುವಕರನ್ನು ಸಜ್ಜುಗೊಳಿಸಲು ತರಬೇತಿ ಕೇಂದ್ರಗಳನ್ನು ರಾಜ್ಯ ಸರ್ಕಾರ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.