ADVERTISEMENT

ಮೊದಲ ಮಹಾಯುದ್ಧ: ಭಾರತದ ಕೊಡುಗೆ ಪುಸ್ತಕದಲ್ಲಿ ದಾಖಲು

ಪಿಟಿಐ
Published 20 ಡಿಸೆಂಬರ್ 2018, 20:10 IST
Last Updated 20 ಡಿಸೆಂಬರ್ 2018, 20:10 IST
   

ನವದೆಹಲಿ: ಮೊದಲ ಮಹಾಯುದ್ಧಕ್ಕೆ ಅವಿಭಜಿತ ಭಾರತ ನೀಡಿದ ಕೊಡುಗೆ, ಯುದ್ಧದಲ್ಲಿ ಪಾಲ್ಗೊಂಡ ಸಿಪಾಯಿಗಳು, ಸಿಪಾಯಿಯೇತರರು ಹಾಗೂ ನಾಗರಿಕರ ಅನುಭವಗಳು ಹೊಸ ಪುಸ್ತಕವೊಂದರಲ್ಲಿ ದಾಖಲಾಗಿವೆ.

‘ಇಂಡಿಯಾ, ಎಂಪೈರ್‌ ಆ್ಯಂಡ್ ಫರ್ಸ್ಟ್‌ ವರ್ಲ್ಡ್ ವಾರ್ ಕಲ್ಚರ್: ರೈಟಿಂಗ್ಸ್‌, ಇಮೇಜಸ್‌ ಆ್ಯಂಡ್ ಸಾಂಗ್ಸ್‌’ ಎನ್ನುವ ಪುಸ್ತಕವನ್ನು ಶಂತನು ದಾಸ್ ಅವರು ರಚಿಸಿದ್ದು,ಈ ಹಿಂದೆ ದಾಖಲಾಗದೆ ಹೋಗಿರುವ ಸಂಗತಿಗಳು ಇಲ್ಲಿ ಉಲ್ಲೇಖವಾಗಿವೆ.

ಯುದ್ಧದಲ್ಲಿ ಪಾಲ್ಗೊಂಡವರಪತ್ರ, ದಿನಚರಿ ಹಾಗೂ ಅವರಿಗೆ ಸಂಬಂಧಿಸಿದವಸ್ತುಗಳು, ಚಿತ್ರಗಳು, ವರದಿಗಳು,
ಭಿತ್ತಿಪತ್ರಗಳು, ಕವನ, ಪ್ರಬಂಧಗಳು ಸೇರಿದಂತೆಹಲವು ವಿಶಿಷ್ಟ ಮೂಲಗಳನ್ನು ಬಳಸಿಕೊಂಡು ರಚಿಸಿರುವ ಈ ಪುಸ್ತಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಇತಿಹಾಸದ ದಾಖಲೆಯಾಗಿದೆ.

ADVERTISEMENT

ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ಭಾರತದ ಸುಮಾರು 15 ಲಕ್ಷ ಜನರಲ್ಲಿ, ಬಹುತೇಕರು ವಿದೇಶದಲ್ಲಿ ನಿಯೋಜನೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.