ADVERTISEMENT

ಅಂಬೇಡ್ಕರ್ ಅವಹೇಳನ: ಮಸಿ ದಾಳಿ ಭೀತಿಯಿಂದ ಫೇಸ್ ಶೀಲ್ಡ್ ಧರಿಸಿಕೊಂಡ ಮಹಾ ಸಚಿವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2022, 3:23 IST
Last Updated 18 ಡಿಸೆಂಬರ್ 2022, 3:23 IST
ಚಂದ್ರಕಾಂತ್‌ ಪಾಟೀಲ್‌
ಚಂದ್ರಕಾಂತ್‌ ಪಾಟೀಲ್‌   

ಮುಂಬೈ:ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್‌ ಅವರ ಮುಖಕ್ಕೆ ಕಳೆದ ವಾರ ವ್ಯಕ್ತಿಯೊಬ್ಬರು ಮಸಿ ಎರಚಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಪಾಟೀಲರು ಸಾರ್ವಜನಿಕ ಸ್ಥಳಗಳಿಗೆ ಹೋಗುವ ಮುನ್ನ ಫೇಸ್‌ ಶೀಲ್ಡ್‌ ಧರಿಸುತ್ತಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಚಿತ್ರಗಳನ್ನು ಪಾಟೀಲರು ತಮ್ಮ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಪಿಂಪ್ರಿ ಚಿಂಚವಾಡ ನಗರ ಪಾಲಿಕೆಡಿಸೆಂಬರ್‌ 16ರಿಂದಆಯೋಜಿಸಿರುವ 'ಪಾವನತಾಡಿ ಯಾತ್ರೆ'ಗೆ ತೆರಳಿದ್ದ ಸ್ವ–ಸಹಾಯ ಗುಂಪಿನ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವ ಚಿತ್ರಗಳನ್ನು ಅವರು ಶೇರ್‌ ಮಾಡಿದ್ದಾರೆ. 'ಯಾತ್ರೆಯಲ್ಲಿ ಮಹಿಳಾ ಸ್ವ–ಸಹಾಯ ಗುಂಪಿನ ಸದಸ್ಯರು ಭಾಗವಹಿಸಿರುವುದು ಗಮನಾರ್ಹ. ಗುಂಪುಗಳಿಗೆ ಅಗತ್ಯ ನೆರವು ನೀಡಲಾಗುವುದು' ಎಂದು ಬರೆದುಕೊಂಡಿದ್ದಾರೆ.

ADVERTISEMENT

ಪಾಟೀಲ್‌ ಅವರಮುಖಕ್ಕೆಮಸಿ ಎರಚಿದ್ದೇಕೆ?
ಕೆಲವು ದಿನಗಳ ಹಿಂದೆ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಚಿವ ಪಾಟೀಲ್‌, ‘ಅಂಬೇಡ್ಕರ್‌ ಮತ್ತು ಫುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನ ಕೇಳಿರಲಿಲ್ಲ, ಶಾಲೆ ಮತ್ತು ಕಾಲೇಜುಗಳನ್ನು ಆರಂಭಿಸಲು ನಿಧಿ ಸಂಗ್ರಹಕ್ಕಾಗಿ ಅವರು ಜನರಿಂದ ಭಿಕ್ಷೆ ಬೇಡಿದ್ದರು’ ಎಂದು ಹೇಳಿದ್ದರು. ಅವರು ಬಳಸಿದ ‘ಭಿಕ್ಷೆ’ ಪದ ವಿವಾದಕ್ಕ ಕಾರಣವಾಗಿತ್ತು.

ಪುಣೆ ನಗರದಲ್ಲಿಡಿಸೆಂಬರ್‌ 10 ರಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಚಿವರುಹೊರಗೆ ಬರುತ್ತಿದ್ದಂತೆಯೇ ಎದುರಿನಿಂದ ನುಗ್ಗಿದ ವ್ಯಕ್ತಿಯೊಬ್ಬ ಚೀರಾಡುತ್ತ ಮುಖಕ್ಕೆ ಮಸಿ ಎರಚಿದ್ದರು.

ತಕ್ಷಣ ಧಾವಿಸಿದ ಪೊಲೀಸರು ಸಚಿವರನ್ನು ದೂರ ಸರಿಸಿ, ಆರೋಪಿಯನ್ನು ಬಂಧಿಸಿದ್ದರು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಲೋಪದ ಆರೋಪದಲ್ಲಿ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚವಾಡ ಪೊಲೀಸ್‌ ಠಾಣೆಯ ಮೂವರು ಅಧಿಕಾರಿ ಮತ್ತು ಏಳು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.