ADVERTISEMENT

ಛತ್ತೀಸಗಡದಲ್ಲಿ ಬಿಜೆಪಿ ಮೇಲಿನ ವಿಶ್ವಾಸ ಕಳೆದುಕೊಂಡ ಮತದಾರರು!

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 11:13 IST
Last Updated 11 ಡಿಸೆಂಬರ್ 2018, 11:13 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್    

ನವದೆಹಲಿ: 'ರಮಣ್ ಪರ್ ವಿಶ್ವಾಸ್ ಕಮಲ್ ಸಂಗ್ ವಿಕಾಸ್'(ರಮಣ್ ಸಿಂಗ್ ಮೇಲೆ ನಂಬಿಕೆ,ಬಿಜೆಪಿ ಜತೆ ಅಭಿವೃದ್ಧಿ) ಎಂಬ ಘೋಷಣೆಯೊಂದಿಗೆ ಬಿಜೆಪಿ ಈ ಬಾರಿ ಛತ್ತೀಸಗಡದಲ್ಲಿ ಚುನಾವಣೆ ಎದುರಿಸಿತ್ತು. ಆದರೆ ಮತದಾರರು ರಮಣ್ ಸಿಂಗ್ ಅವರ ಮೇಲೆ ನಂಬಿಕೆ ಇಟ್ಟರೂ ಬಿಜೆಪಿಗೆ ಮತ ನೀಡಲು ಮುಂದಾಗಲಿಲ್ಲ.

15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ರಮಣ್ ಸಿಂಗ್ ಛತ್ತೀಸಗಡದಲ್ಲಿ ವಿಕಾಸ ಯಾತ್ರೆ ಕೈಗೊಂಡಿದ್ದು ಬಿಜೆಪಿಯ ನಿರೀಕ್ಷೆ ಹೆಚ್ಚಿಸಿತ್ತು.ಇಲ್ಲಿ ಮೋದಿ ಹವಾಗಿಂತ ರಮಣ್ ಸಿಂಗ್ ಮೇಲಿನ ಭರವಸೆ ಬಿಜೆಪಿಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿತ್ತು. ಆದರೆ ವಿಕಾಸಯಾತ್ರೆಗೆ ಸಿಕ್ಕಿದ ಜೈಕಾರ ಇಲ್ಲಿ ಮತವಾಗಿ ಬದಲಾಗಿಲ್ಲ.ಅಷ್ಟೇ ಅಲ್ಲದೆ ಅಜಿತ್ ಜೋಗಿಯಿಂದಾಗಿ ಕಾಂಗ್ರೆಸ್ ಪಾಳಯದಲ್ಲುಂಟಾದ ಭಿನ್ನಮತ ತಮಗೆ ವರವಾಗುತ್ತದೆಎಂಬ ನಂಬಿಕೆ ಬಿಜೆಪಿಗೆ ಇತ್ತು.ಆದರೆ ಬಿಜೆಪಿಯ ಕಾರ್ಯತಂತ್ರ ಇಲ್ಲಿ ಫಲಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT