ADVERTISEMENT

ಚಿರಾಪುಂಜಿ: 24 ತಾಸುಗಳಲ್ಲಿ 811.6 ಮಿ.ಮೀ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 15:57 IST
Last Updated 15 ಜೂನ್ 2022, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಮಾನ್ಸೂನ್ ಮಳೆಯು ಈಶಾನ್ಯ ರಾಜ್ಯಗಳನ್ನು ಪ್ರವೇಶಿಸುತ್ತಿದ್ದಂತೆ ಮೇಘಾಲಯದ ಚಿರಾಪುಂಜಿಯಲ್ಲಿ ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ 811.6 ಮಿ.ಮೀ ಭಾರಿ ಮಳೆ ಸುರಿದಿದೆ.

1995ರ ಜೂನ್‌ನಿಂದ ಈವರೆಗೆ ಇಷ್ಟೊಂದು ಪ್ರಮಾಣದ ಮಳೆ ಒಂದೇ ದಿನದಲ್ಲಿ ಸುರಿದಿರಲಿಲ್ಲ. 27 ವರ್ಷಗಳ ನಂತರ ಅತಿ ಹೆಚ್ಚು ಮಳೆ ಬಿದ್ದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಚಿರಾಪುಂಜಿಯಿಂದ 10 ಕಿ.ಮೀ ವೈಮಾನಿಕ ಅಂತರದಲ್ಲಿ, ದೇಶದ ಅತ್ಯಂತ ಆರ್ದ್ರ ಸ್ಥಳವಾದ ಮೌಸಿನ್ರಾಮ್‌ನಲ್ಲಿ ಇದೇ ಅವಧಿಯಲ್ಲಿ 710.6 ಮಿ.ಮೀ ಮಳೆ ದಾಖಲಾಗಿದೆ. ಇದು1966ರಜೂನ್‌ ನಂತರ ಸುರಿದ ಗರಿಷ್ಠ ಮಳೆ ಎನಿಸಿದೆ.

ADVERTISEMENT

ವಿಶ್ವದ ಅತ್ಯಂತ ಆರ್ದ್ರ ಸ್ಥಳಗಳಲ್ಲಿ ಒಂದಾದ ಚಿರಾಪುಂಜಿಯಲ್ಲಿ ಜೂನ್‌ನಲ್ಲಿ ಒಂದೇ ದಿನದಲ್ಲಿ ದಾಖಲೆಯ 750 ಮಿಲಿ ಮೀಟರ್‌ಗಿಂತ ಹೆಚ್ಚು ಮಳೆ ಬಿದ್ದಿರುವುದು ಐಎಂಡಿ ದತ್ತಾಂಶದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.