ADVERTISEMENT

96 ದಿನಗಳಲ್ಲಿ 96 ಫ್ಲ್ಯಾಟ್‌ ನಿರ್ಮಿಸಿದ ‘ಸಿಡ್ಕೊ’

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 13:40 IST
Last Updated 26 ಜುಲೈ 2022, 13:40 IST

ಮುಂಬೈ/ರಾಯಗಢ: ಮಹಾರಾಷ್ಟ್ರದ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮವು (ಸಿಡ್ಕೊ) 96 ದಿನಗಳಲ್ಲಿ 96 ಫ್ಲ್ಯಾಟ್‌ಗಳನ್ನು ನಿರ್ಮಿಸಿ ದಾಖಲೆ ಬರೆದಿದೆ.

ಮುಂಬೈನ ಬಾಮನ್‌ಡೊಂಗ್ರಿಯಲ್ಲಿ 96 ಫ್ಲ್ಯಾಟ್‌ಗಳನ್ನೊಳಗೊಂಡ 12 ಅಂತಸ್ತಿನ ವಸತಿ ಸಂಕೀರ್ಣವನ್ನು ಸಿಡ್ಕೊ ನಿರ್ಮಾಣ ಮಾಡಿದೆ. ಇದರೊಂದಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ (ಪಿಎಂಎವೈ) ಆಶಯ ಸಾಕಾರಗೊಳಿಸಿದೆ.

‘ಮಿಸೆಸ್‌ ಲಾರ್ಸನ್‌ ಆ್ಯಂಡ್‌ ಟೌಬ್ರೊ ಕಂಪನಿಯು ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಅತಿ ಕಡಿಮೆ ಸಮಯದಲ್ಲಿ ಸುರಕ್ಷಿತ ಹಾಗೂ ಗುಣಮಟ್ಟದ ಫ್ಲ್ಯಾಟ್‌ಗಳನ್ನು ನಿರ್ಮಿಸಿದೆ. ಈ ವರ್ಷದ ಏಪ್ರಿಲ್‌ 4ರಂದು ಕಾಮಗಾರಿ ಆರಂಭಿಸಿದ್ದ ಕಂಪನಿಯು ಜುಲೈ 9ರಂದು ಅದನ್ನು ಪೂರ್ಣಗೊಳಿಸಿದೆ’ ಎಂದು ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.