ADVERTISEMENT

ಇದೇ ತಿಂಗಳೊಳಗೆ ಕಲ್ಲಿದ್ದಲು ಲಭ್ಯತೆ ಸುಧಾರಣೆ: ಐಸಿಆರ್‌ಎ

ಪಿಟಿಐ
Published 13 ಅಕ್ಟೋಬರ್ 2021, 14:56 IST
Last Updated 13 ಅಕ್ಟೋಬರ್ 2021, 14:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲಿನ ಲಭ್ಯತೆ ಈ ತಿಂಗಳೊಳಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ಬುಧವಾರ ಐಸಿಆರ್‌ಎ ತಿಳಿಸಿದೆ.

‘ಕಲ್ಲಿದ್ದಲು ಉತ್ಪಾದನೆ ಮತ್ತು ಪೂರೈಕೆ ಮಟ್ಟವೂ ಶೀಘ್ರವೇ ವೃದ್ಧಿಸಲ್ಲಿದ್ದು, ನವೆಂಬರ್‌ ತಿಂಗಳಿಂದ ಅಗತ್ಯವಾದ ಇಂಧನ ಬೇಡಿಕೆಯ ಬಗ್ಗೆ ಸಮನ್ವಯತೆ ಸಾಧಿಸಲಾಗುವುದು’ ಎಂದು ಐಸಿಆರ್‌ಎ ಹಿರಿಯ ಉಪಾಧ್ಯಕ್ಷ ಮತ್ತು ತಂಡದ ಮುಖ್ಯಸ್ಥ ಸವ್ಯಸಾಚಿ ಮಜುಂದಾರ್‌ ಹೇಳಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಕೋಲ್‌ ಇಂಡಿಯಾ ಲಿಮಿಟೆಡ್‌ (ಸಿಐಎಲ್‌) ತನ್ನ ಉತ್ಪಾದನೆಯನ್ನು ದಿನಕ್ಕೆ 1.6 ದಶಲಕ್ಷ ಟನ್‌ಗಳಷ್ಟು ಹೆಚ್ಚಿಸಿದ್ದು, ದಸರಾ ರಜೆ ಮುಗಿಸಿ ಕಾರ್ಮಿಕರು ಹಿಂದಿರುಗಿದ ನಂತರ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.