ಬಿಜ್ನೋರ್: ಮಗನ ಮದುವೆಯ ಲಗ್ನ ಪತ್ರಿಕೆ ಹಂಚಲು ಹೋದ ದಂಪತಿಯು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆಯು ಉತ್ತರಪ್ರದೇಶದ ಬಿಜ್ನೋರ್‌ನಲ್ಲಿ ಜರುಗಿದೆ.
ಭಾನುವಾರ ರಾತ್ರಿಯ ವೇಳೆ ಮಗನ ಮದುವೆಯ ಲಗ್ನ ಪತ್ರಿಕೆಗಳನ್ನು ಸಂಬಂಧಿಕರ ಮನೆಗಳಿಗೆ ಹಂಚಿ, ಬೈಕ್‌ನಲ್ಲಿ ದಂಪತಿಗಳು ಮನೆಗೆ ಮರಳುವಾಗ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದರು.
ಖೂಬ್ ಸಿಂಗ್ (62) ಮತ್ತು ಅವರ ಪತ್ನಿ ಲಾಲಿ ದೇವಿ(56) ಅವರು ಜೂನ್ 9ರಂದು ನಡೆಯುವ ಮಗನ ಮದುವೆಯ ಲಗ್ನ ಪತ್ರಿಕೆಗಳನ್ನು ಹಂಚಿ ನಾಗಿನಾ-ಧಾಮ್‌ಪುರ ರಸ್ತೆಯಲ್ಲಿ ಬೈಕಿನಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.