ಬಾಬಾ ಸಿದ್ದೀಕಿ
–ಪಿಟಿಐ ಚಿತ್ರ
ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ಅವರ ಪತ್ನಿ ಶೆಹ್‌ಜೀನ್ ಸಿದ್ದೀಕಿ ಅವರಿಗೆ ಶನಿವಾರ ಇಲ್ಲಿನ ವಿಶೇಷ ನ್ಯಾಯಾಲಯವು ಅನುಮತಿ ನೀಡಿದೆ.
2024ರ ಅ.12ರಂದು ಮುಂಬೈನ ಬಾಂದ್ರಾ (ಪೂರ್ವ)ದಲ್ಲಿರುವ ಅವರ ಪುತ್ರ ಝೀಶನ್ ಕಚೇರಿಯ ಮುಂಭಾಗದಲ್ಲಿಯೇ ಅಪರಿಚಿತರ ಗುಂಡಿನ ದಾಳಿಗೆ 66 ವರ್ಷದ ಬಾಬಾ ಸಿದ್ದೀಕಿ ಅವರು ಬಲಿಯಾಗಿದ್ದರು.
ಪತಿಯ ಸಾವಿನಿಂದ ತುಂಬಲಾರದ ನಷ್ಟ ಉಂಟಾಗಿದ್ದು, ಸತ್ಯ ಹಾಗೂ ನೈಜ ಮಾಹಿತಿಯನ್ನು ನ್ಯಾಯಾಲಯಕ್ಕೆ ತಿಳಿಸುವ ದೃಷ್ಟಿಯಿಂದ ಪ್ರಕರಣದಲ್ಲಿ ಮಧ್ಯಪ್ರವೇಶಕ್ಕೆ ಅವಕಾಶ ಕೋರಿ ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ.ಡಿ.ಶೆಲ್ಕೆ ಅವರಿಗೆ ಶೆಹ್‌ಜೀನ್ ಸಿದ್ದೀಕಿ ಮನವಿ ಮಾಡಿದ್ದರು.
‘ಈ ಪ್ರಕರಣದಲ್ಲಿ ಶೆಹ್‌ಜೀನ್ ಅವರು ಪ್ರತಿವಾದಿಯಾಗಲಿದ್ದು, ಪ್ರಾಸಿಕ್ಯೂಷನ್‌ಗೆ ಸಹಕರಿಸಲಿದ್ದಾರೆ. ಕಾನೂನು ಪ್ರಕ್ರಿಯೆಯಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ’ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.