ನವದೆಹಲಿ: ಶುಲ್ಕ ಪಾವತಿಸದ ಕಾರಣ ವಿದ್ಯಾರ್ಥಿಗಳಿಗೆ ಅಗೌರವ ತೋರಿ, ಅವರನ್ನು ಗ್ರಂಥಾಲಯದಲ್ಲಿ ಬಂಧಿಸಿದ ಮತ್ತು ತರಗತಿ ಪ್ರವೇಶಕ್ಕೆ ನಿರಾಕರಿಸಿದ ದ್ವಾರಕ ಪಬ್ಲಿಕ್ ಶಾಲೆಯನ್ನು ದೆಹಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತು.
ನ್ಯಾಯಮೂರ್ತಿ ಸಚಿನ್ ದತ್ತಾ ಅವರು, ವಿದ್ಯಾರ್ಥಿಗಳನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಬೇಕಾಬಿಟ್ಟಿ ನಡೆಸಿಕೊಳ್ಳುವ ಶಾಲೆಯು ಬಾಗಿಲು ಮುಚ್ಚಲು ಅರ್ಹವಾಗಿದೆ ಎಂದು ಛೀಮಾರಿ ಹಾಕಿದರು.
ಶಾಲೆಯು ‘ಹಣ ಗಳಿಸುವ ಸಾಧನ’ ಎಂಬಂತೆ ಪರಿಗಣಿಸುವ ಶೈಕ್ಷಣಿಕ ಸಂಸ್ಥೆಗಳು ಮಕ್ಕಳಿಗೆ ಕಿರುಕುಳ ನೀಡದಂತೆ ರಕ್ಷಿಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಅಮಾನವೀಯವಾಗಿ, ಅಗೌರವದಿಂದ ನಡೆಸಿಕೊಳ್ಳಲು ಶಾಲೆಗಳಿಗೆ ಪರವಾನಗಿ ನೀಡಿಲ್ಲ ಎಂದು ಕಟುವಾಗಿ ಹೇಳಿದರು.
ವಿಚಾರಣೆ ಸಂದರ್ಭದಲ್ಲಿ ಶಾಲೆಯ ಹಲವು ವಿದ್ಯಾರ್ಥಿಗಳು ಸಮವಸ್ತ್ರ, ಪುಸ್ತಕ ಮತ್ತು ಬ್ಯಾಗ್‌ಗಳೊಂದಿಗೆ ಕೋರ್ಟ್‌ನಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.