ADVERTISEMENT

Covid-19 India Update: 60,471 ಹೊಸ ಕೋವಿಡ್‌ ಪ್ರಕರಣಗಳು ದೃಢ

75 ದಿನಗಳಲ್ಲೇ ಪತ್ತೆಯಾದ ಅತಿ ಕಡಿಮೆ ಪ್ರಕರಣಗಳು

ಪಿಟಿಐ
Published 15 ಜೂನ್ 2021, 6:05 IST
Last Updated 15 ಜೂನ್ 2021, 6:05 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದಾದ್ಯಂತ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಹೊಸದಾಗಿ 60,471 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿವೆ.

ಇದು ಕಳೆದ 75 ದಿನಗಳಲ್ಲೇ ಪತ್ತೆಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.95 ಕೋಟಿಗೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಈಗ 9.13 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕೋವಿಡ್‌–19ನಿಂದ ಮತ್ತೆ 2,726 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದ, ಇದುವರೆಗೆ ಸಾವಿಗೀಡಾದವರ ಸಂಖ್ಯೆ 3.77 ಲಕ್ಷಕ್ಕೆ ಏರಿಕೆಯಾಗಿದೆ.ಮಹಾರಾಷ್ಟ್ರದಲ್ಲಿ 1592, ತಮಿಳುನಾಡಿನಲ್ಲಿ 254, ಕೇರಳದಲ್ಲಿ 161 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದೆ.

ADVERTISEMENT

ಪಾಸಿಟಿವಿಟಿ ದರವು ಶೇಕಡ 3.45ರಷ್ಟು ದಾಖಲಾಗಿದೆ. ಸತತ ಎಂಟು ದಿನಗಳಿಂದ ಶೇಕಡ 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದೆ. ಗುಣಮುಖರಾಗುವವರ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಶೇಕಡ 95.64ರಷ್ಟು ದಾಖಲಾಗಿದೆ. ಇದುವರೆಗೆ, 2.82 ಕೋಟಿ ಮಂದಿ ಗುಣಮುಖರಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ದೇಶದಾದ್ಯಂತ ಇದುವರೆಗೆ 25.90 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.