ADVERTISEMENT

ಕೋವಿಡ್ ಪೀಡಿತರಿಗೆ ಔಷಧ: ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಪಿಟಿಐ
Published 18 ಜನವರಿ 2022, 1:34 IST
Last Updated 18 ಜನವರಿ 2022, 1:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್ ರೋಗಿಗಳಿಗೆ ಔಷಧ ಬಳಕೆ ಮತ್ತು ಚಿಕಿತ್ಸೆ ಕ್ರಮ ಕುರಿತಂತೆ ಕೇಂದ್ರ ಸರ್ಕಾರ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆಮ್ಲಜನಕದ ನೆರವಿನಲ್ಲಿ ಇಲ್ಲದ ಕೋವಿಡ್‌ ರೋಗಿಗಳಿಗೆ ಚುಚ್ಚುಮದ್ದು ಸ್ಟಿರಾಯ್ಡ್‌ ನೆರವಾಗಲಿವೆ ಎಂಬುದಕ್ಕೆ ಯಾವುದೇ ಸಮರ್ಥನೆಯಿಲ್ಲ ಎಂದು ಹೇಳಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯದಡಿ ಬರುವ ಏಮ್ಸ್‌, ಐಸಿಎಂಆರ್‌ ಕೋವಿಡ್‌ನ ರಾಷ್ಟ್ರೀಯ ಕಾರ್ಯಪಡೆ ಮತ್ತು ಜಂಟಿ ನಿರ್ವಹಣಾ ಸಮೂಹ (ಡಿಜಿಎಚ್ಎಸ್‌) ಈ ಪರಿಷ್ಕೃತ ನಿಯಮಗಳನ್ನು ಬಿಡುಗಡೆ ಮಾಡಿದೆ. ಸ್ಟಿರಾಯ್ಡ್‌ ಅನ್ನು ಅಗತ್ಯಕ್ಕಿಂತಲೂ ಬೇಗ ಅಥವಾ ದೀರ್ಘಾವಧಿ ಬಳಸಿದರೆ ಕಪ್ಪುಶಿಲೀಂದ್ರದಂತಹ ಸಮಸ್ಯೆ ಕಾಣಿಸಬಹುದು ಎಂದಿದೆ.

ಇನ್‌ಹೇಲರ್ ಅಥವಾ ಒಣ ಪುಡಿಯ ಸ್ವರೂಪದಲ್ಲಿ 900 ಎಂಸಿಜಿ ಬಿ.ಡಿ ಡೋಸ್‌ ಅನ್ನು ಐದು ದಿನ ಕಾಲ ಸಾಮಾನ್ಯ ಲಕ್ಷಣಗಳಿರುವ (ಜ್ವರ ಅಥವಾ ಕೆಮ್ಮು) ಪ್ರಕರಣಗಳಲ್ಲಿ ನೀಡಬಹುದು ಎಂದು ನಿಯಮಗಳಲ್ಲಿ ಹೇಳಲಾಗಿದೆ.

ADVERTISEMENT

ಕೆಮ್ಮು ಎರಡು–ಮೂರು ವಾರಗಳಿಗೂ ಅಧಿಕ ದಿನ ಇದ್ದರೆ ಕಡ್ಡಾಯವಾಗಿ ಕ್ಷಯರೋಗ ಅಥವಾ ಇತರೆ ಆರೋಗ್ಯ ಸ್ಥಿತಿ ಕುರಿತಂತೆ ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಆಮ್ಲಜನಕದ ನೆರವಿನಲ್ಲಿ ಇಲ್ಲದ ಹಾಗೂ ಮನೆಯ ವಾತಾವರಣದಲ್ಲಿ ಇರುವ ರೋಗಿಗಳು ಔಷಧ ಬಳಸಬಾರದು ಎಂದು ಎಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.