ನವದೆಹಲಿ (ಪಿಟಿಐ): ತೂಕ ಇಳಿಕೆಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧ ಸಂಯೋಜನೆಗಳ ಕುರಿತ ಅರ್ಜಿ ಬಗ್ಗೆ ನಿರ್ಧರಿಸಲು ಸಂಬಂಧಪಟ್ಟ ತಜ್ಞರು ಹಾಗೂ ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೆ (ಡಿಜಿಸಿಐ) ದೆಹಲಿ ಹೈಕೋರ್ಟ್ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲಾ ಅವರನ್ನು ಒಳಗೊಂಡ ನ್ಯಾಯಪೀಠವು, ಡಿಜಿಸಿಐಗೆ ಮನವಿ ಮಾಡುವಂತೆ ಅರ್ಜಿದಾರರಿಗೆ ತಿಳಿಸಿತು. ಈ ವಿಚಾರದ ಬಗ್ಗೆ ಮೂರು ತಿಂಗಳ ಒಳಗಾಗಿ ನಿರ್ಧಾರ ಕೈಗೊಳ್ಳುವಂತೆ ಡಿಜಿಸಿಐಗೆ ನಿರ್ದೇಶನ ನೀಡಿತು.
ನಿರ್ದಿಷ್ಟ ಪ್ರಯೋಗ ಮತ್ತು ಅಧ್ಯಯನ ನಡೆಸದೆಯೇ ತೂಕ ಇಳಿಕೆ ಔಷಧಗಳಿಗೆ ಪರವಾನಗಿ ನೀಡಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.