ADVERTISEMENT

ಲಘು ಭೂಕಂಪನ: ದೆಹಲಿ ಮೆಟ್ರೊ ಸೇವೆ ಕೆಲಕಾಲ ವಿಳಂಬ

ಪಿಟಿಐ
Published 26 ಜುಲೈ 2021, 14:52 IST
Last Updated 26 ಜುಲೈ 2021, 14:52 IST
ದೆಹಲಿ ಮೆಟ್ರೊ ರೈಲು (ಸಾಂದರ್ಭಿಕ ಚಿತ್ರ)
ದೆಹಲಿ ಮೆಟ್ರೊ ರೈಲು (ಸಾಂದರ್ಭಿಕ ಚಿತ್ರ)   

ನವದೆಹಲಿ: ‘ರಾಜಧಾನಿ ದೆಹಲಿಯಲ್ಲಿ ಸೋಮವಾರದಿಂದ ಪೂರ್ಣಪ್ರಮಾಣದಲ್ಲಿ ಮೆಟ್ರೊ ರೈಲು ಸೇವೆಯು ಆರಂಭವಾಗಿದ್ದು, ಲಘು ಭೂಕಂಪನದ ಕಾರಣ, ಕೆಲಕಾಲ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 6.42ರ ವೇಳೆಗೆ ಲಘುವಾಗಿ ಭೂಮಿ ಕಂಪಿಸಿದ್ದು ದೃಢಪಟ್ಟಿದೆ. ಹಾಗಾಗಿ, ರೈಲುಗಳನ್ನು ಎಚ್ಚರಿಕೆಯ ವೇಗದಲ್ಲಿ ಓಡಿಸಲಾಯಿತು. ನಂತರ ಮುಂದಿನ ಫ್ಲಾಟ್‌ಫಾರಂನಲ್ಲಿ ನಿಲ್ಲಿಸಲಾಯಿತು. 10–15 ನಿಮಿಷಗಳ ವಿಳಂಬದ ಬಳಿಕ ಸೇವೆಯನ್ನು ಪುನರಾರಂಭಿಸಲಾಯಿತು. ಇದಕ್ಕೂ ಮುನ್ನ ಪ್ರತಿಯೊಂದು ವ್ಯವಸ್ಥೆಯನ್ನು ಕೂಲಕಂಷವಾಗಿ ಪರಿಶೀಲಿಸಲಾಯಿತು’ ಎಂದು ದೆಹಲಿ ಮೆಟ್ರೊ ರೈಲು ನಿಗಮದ (ಡಿಎಂಆರ್‌ಸಿ) ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಜೂನ್ 7ರಿಂದ ಮೆಟ್ರೊ ರೈಲು ಸೇವೆಗಳನ್ನು ಪುನರಾರಂಭಿಸಲಾಗಿದೆ. ಸೋಮವಾರದಿಂದ ಪೂರ್ಣಪ್ರಮಾಣದ ಆಸನ ಸಾಮರ್ಥ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.