ADVERTISEMENT

ರನ್‌ವೇಗೆ ಬಂದ ನಾಯಿ: ವಿಮಾನ ಹಾರಾಟ ಸ್ಥಗಿತ

ಪಿಟಿಐ
Published 1 ಸೆಪ್ಟೆಂಬರ್ 2019, 20:04 IST
Last Updated 1 ಸೆಪ್ಟೆಂಬರ್ 2019, 20:04 IST

ನವದೆಹಲಿ: ವಿಮಾನ ನಿರ್ಗಮನಕ್ಕೆ ಸಿದ್ಧತೆ ನಡೆಯುತ್ತಿದ್ದ ವೇಳೆ ಗೋವಾ ವಿಮಾನ ನಿಲ್ದಾಣದ ರನ್‌ವೇಗೆ ಬೀದಿ ನಾಯಿ ಬಂದ ಹಿನ್ನೆಲೆಯಲ್ಲಿ ಏರ್‌ಏಷ್ಯಾ ವಿಮಾನ ಹಾರಾಟವನ್ನು ರದ್ದುಗೊಳಿಸಲಾಯಿತು.

‘ರನ್‌ವೇಯಲ್ಲಿ ನಾಯಿ ಇರುವುದನ್ನು ಗಮನಿಸಿದ ವಾಯು ಸಂಚಾರ ನಿಯಂತ್ರಣ ಸಿಬ್ಬಂದಿ ತಕ್ಷಣ ಅಲ್ಲಿಂದ ಓಡಿಸಿದ್ದಾರೆ. ಬೆಳಿಗ್ಗೆ 8.25ಕ್ಕೆ ಹೊರಡಬೇಕಿದ್ದ ವಿಮಾನ 9.15ಕ್ಕೆ ದೆಹಲಿಗೆಪ್ರಯಾಣ ಬೆಳೆಸಿತು’ ಎಂದು ವಿಮಾನಯಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ವಿಳಂಬಕ್ಕೆ ವಿಷಾದ ವ್ಯಕ್ತಪಡಿಸಿರುವ ಏರ್‌ಏಷ್ಯಾ ಇಂಡಿಯಾ ಕಂಪನಿ, ‘ಸುರಕ್ಷತೆಗೆ ನಾವು ಆದ್ಯತೆ ನೀಡುತ್ತೇವೆ. ಆದರೆ ನಮ್ಮ ನಿಯಂತ್ರಣ ಮೀರಿದ ಕಾರಣಗಳಿಂದಾಗಿ ವಿಳಂಬವಾಗಿದೆ’ ಎಂದು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.