ADVERTISEMENT

ಫೋನಿ ಚಂಡಮಾರುತಕ್ಕೆ 12 ಮಂದಿ ಬಲಿ

ಏಜೆನ್ಸೀಸ್
Published 4 ಮೇ 2019, 8:32 IST
Last Updated 4 ಮೇ 2019, 8:32 IST
   

ಭುವನೇಶ್ವರ: ಒಡಿಶಾ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಫೋನಿ ಚಂಡಮಾರುತಕ್ಕೆ 12 ಮಂದಿ ಬಲಿಯಾಗಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಆದರೆ ಇಲ್ಲಿನ ವಿಶೇಷ ಪರಿಹಾರ ಆಯುಕ್ತ ವಿಷ್ಣುಪಾದ ಸೇಥಿ, ಮೂವರ ಸಾವನ್ನು ದೃಢಿಕರಿಸಿದ್ದಾರೆ.

ಒಡಿಶಾದ 12 ಜಿಲ್ಲೆಗಳು ಚಂಡಮಾರುತಕ್ಕೆ ತತ್ತರಗೊಂಡಿದ್ದು, ಒಂದೇ ದಿನದಲ್ಲಿ 10ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

ADVERTISEMENT

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಒಡಿಶಾದ ಪುರಿಗೆ 220 ಕಿ.ಮೀ ವೇಗದಲ್ಲಿ ಪ್ರವೇಶಿಸಿದ ಚಂಡಮಾರುತವು ಹಲವು ಅವಾಂತರ ಸೃಷ್ಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ (ಮೇ6) ಒಡಿಶಾಕ್ಕೆ ಭೇಟಿ ನೀಡಿ ಫೋನಿ ಚಂಡಮಾರುತದ ಪರಿಣಾಮಗಳನ್ನು ವೀಕ್ಷಿಸುವ ಬಗ್ಗೆ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.