ADVERTISEMENT

ಮೋದಿ ಸಿನಿಮಾ: ವಿವರಣೆ ಕೇಳಿದ ಚುನಾವಣಾ ಆಯೋಗ

ಪಿಟಿಐ
Published 27 ಮಾರ್ಚ್ 2019, 19:24 IST
Last Updated 27 ಮಾರ್ಚ್ 2019, 19:24 IST

ನವದೆಹಲಿ: ಪ್ರಧಾನಿ ಜೀವನಾಧಾರಿತ ‘ಪಿಎಂ ನರೇಂದ್ರ ಮೋದಿ’ ಚಿತ್ರದ ಬಿಡುಗಡೆಯನ್ನುಲೋಕಸಭಾ ಚುನಾವಣೆ ಮುಗಿಯುವವರೆಗೆ ಮುಂದೂಡುವಂತೆ ವಿರೋಧ ಪಕ್ಷಗಳು ಮನವಿ ಮಾಡಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಚಿತ್ರದ ನಿರ್ಮಾಪಕರಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಈ ಬಗ್ಗೆ ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಯು ನಿರ್ಮಾಪಕರಿಗೆ ಈಗಾಗಲೇ ನೋಟಿಸ್ ನೀಡಿದ್ದಾರೆ. ಚಿತ್ರ ಬಿಡುಗಡೆಗೆ ವಿಳಂಬ ಮಾಡಿದ್ದು ಏಕೆ ಎಂದು ತಿಳಿಯಲು ಆಯೋಗ ಬಯಸಿದೆ. ಸಂಗೀತ ನೀಡಿದ ಸಂಸ್ಥೆ ಹಾಗೂ ಚಿತ್ರದ ಜಾಹೀರಾತು ಪ್ರಕಟಿಸಿದ ಪತ್ರಿಕೆಗಳಿಂದಲೂ ಪ್ರತಿಕ್ರಿಯೆ ಕೇಳಲಾಗಿದೆ.

ಏಪ್ರಿಲ್ 5ರಂದು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಚುನಾವಣಾ ನೀತಿ ಸಂಹಿತೆಯನ್ನು ಚಿತ್ರ ಉಲ್ಲಂಘಿಸಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.