ADVERTISEMENT

ಸ್ವಾಯತ್ತ ಸಂಸ್ಥೆ ಸಿಬ್ಬಂದಿ ಸರ್ಕಾರಿ ನೌಕರರ ಸೌಲಭ್ಯ ಕೇಳಲಾಗದು: ಸುಪ್ರೀಂ

ಪಿಟಿಐ
Published 10 ಜನವರಿ 2022, 16:05 IST
Last Updated 10 ಜನವರಿ 2022, 16:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸರ್ಕಾರಿ ನೌಕರರಿಗೆ ನೀಡುವ ಸೇವಾ ಸೌಲಭ್ಯವನ್ನು ತಮಗೂ ನೀಡುವಂತೆಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿ ಒತ್ತಾಯಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಸಂಜೀವ್ ಖನ್ನಾ ಅವರಿದ್ದ ಪೀಠವು, ಕೆಲವೊಂದು ಅನುಕೂಲತೆ ನೀಡಬೇಕೋ ಬೇಡವೋ ಎಂಬುದನ್ನು ಪರಿಣತರ ತಂಡಕ್ಕೆ ಬಿಡಬೇಕು. ಈ ವಿಷಯದಲ್ಲಿ ಕೋರ್ಟ್‌ ಮಧ್ಯ ಪ್ರವೇಶಿಸಲಾಗದು. ಏಕೆಂದರೆ, ಇದು ಆರ್ಥಿಕ ಪ್ರತಿಕೂಲ ಪರಿಣಾಮಗಳನ್ನು ಬೀರಲಿದೆ ಎಂದು ಹೇಳಿತು.

ಮಹಾರಾಷ್ಟ್ರದ ಜಲ ಮತ್ತು ಭೂಮಿ ಮೇಲ್ವಿಚಾರಣೆ ಸಂಸ್ಥೆ (ವಾಲ್ಮಿ) ಸಿಬ್ಬಂದಿಯ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.