ADVERTISEMENT

ಹೈಟೆನ್ಷನ್ ತಂತಿಗೆ ತಾಗಿದ ಕನ್ವರ್‌ ಯಾತ್ರಿಕರಿದ್ದ ವಾಹನ: ಐವರ ಸಾವು

ಪಿಟಿಐ
Published 16 ಜುಲೈ 2023, 2:41 IST
Last Updated 16 ಜುಲೈ 2023, 2:41 IST
   

ಲಖನೌ: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಭಗವಾನ್‌ಪುರ ಪ್ರದೇಶದಲ್ಲಿ ಹೈಟೆನ್ಷನ್ ಓವರ್‌ಹೆಡ್ ತಂತಿಗೆ ವಾಹನವು ತಾಗಿದ ಪರಿಣಾಮ ವಿದ್ಯುತ್ ಶಾಕ್‌ಗೆ ತುತ್ತಾಗಿ ಐವರು ಕನ್ವರ್ ಯಾತ್ರಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಐದು ಜನರ ಸಾವನ್ನು ಖಚಿತಪಡಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ದೀಪಕ್ ಮೀನಾ, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

‘ಕನ್ವರ್ ಯಾತ್ರಿಕರ ಗುಂಪು ರಾತ್ರಿ 8 ಗಂಟೆ ಸುಮಾರಿಗೆ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವಾಹನದ ಕೆಲವು ಭಾಗವು ಹೈಟೆನ್ಷನ್ ತಂತಿಯನ್ನು ತಾಗಿವೆ’ ಎಂದು ಮೀನಾ ಹೇಳಿದರು.

ADVERTISEMENT

ಘಟನೆ ಬಳಿಕ ಹತ್ತು ಕನ್ವರ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಐವರು ಚಿಕಿತ್ಸೆ ವೇಳೆ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.