ADVERTISEMENT

ಇಂದೋರ್: ಕೋವಿಡ್‌ನಿಂದ ಚೇತರಿಸಿಕೊಂಡಿದ್ದ ವ್ಯಕ್ತಿಗೆ ‘ಹಸಿರು ಶಿಲೀಂಧ್ರ’ ಸೋಂಕು

ಪಿಟಿಐ
Published 15 ಜೂನ್ 2021, 21:25 IST
Last Updated 15 ಜೂನ್ 2021, 21:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಂದೋರ್‌: ಕೋವಿಡ್ ಗುಣಮುಖರಾಗಿದ್ದ 34 ವರ್ಷದ ವ್ಯಕ್ತಿಯಲ್ಲಿ ‘ಹಸಿರು ಶಿಲೀಂಧ್ರ’ (ಗ್ರೀನ್‌ ಫಂಗಸ್‌) ಸೋಂಕು ಕಾಣಿಸಿಕೊಂಡಿದೆ.

ರೋಗಿಯನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ಶ್ರೀ ಅರವಿಂದೊ ಇನ್ಸ್‌ ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ನ ಎದೆ ರೋಗಗಳ ವಿಭಾಗದ ಮುಖ್ಯಸ್ಥ ಡಾ.ರವಿ ದೋಸಿ ತಿಳಿಸಿದ್ದಾರೆ.

‘ಕೋವಿಡ್‌ನಿಂದ ಗುಣಮು ಖರಾದರೂ ಜ್ವರ, ಮೂಗಿನಿಂದ ರಕ್ತಸ್ರಾವ ಕಾಣಿಸಿಕೊಂಡಿತ್ತು. ಕಪ್ಪು ಶಿಲೀಂಧ್ರ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಪರೀಕ್ಷೆ ಮಾಡ ಲಾಯಿತು. ಅವರಿಗೆ ‘ಹಸಿರು ಶಿಲೀಂಧ್ರ’ ಸೋಂಕು ತಗುಲಿರುವುದು ದೃಢಪಟ್ಟಿತು’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.