ADVERTISEMENT

ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಮೇಲೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ

ಏಜೆನ್ಸೀಸ್
Published 20 ನವೆಂಬರ್ 2020, 9:12 IST
Last Updated 20 ನವೆಂಬರ್ 2020, 9:12 IST
ಅನಿಲ್‌ ವಿಜ್‌ ಮೇಲೆ ಕೋವ್ಯಾಕ್ಸಿನ್‌ ಪ್ರಯೋಗ ಮಾಡಲಾಯಿತು
ಅನಿಲ್‌ ವಿಜ್‌ ಮೇಲೆ ಕೋವ್ಯಾಕ್ಸಿನ್‌ ಪ್ರಯೋಗ ಮಾಡಲಾಯಿತು   

ಅಂಬಾಲಾ: ಭಾರತ್‍ ಬಯೊಟೆಕ್‍ ಸಂಸ್ಥೆಯು ಕೋವಿಡ್‍ ಚಿಕಿತ್ಸೆಗೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ ಲಸಿಕೆಯನ್ನು ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಅವರ ಮೇಲೆ ಶುಕ್ರವಾರ ಪ್ರಯೋಗಿಸಲಾಯಿತು.

ಅಂಬಾಲಾದ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್‌ ಲಸಿಕೆಯನ್ನು ಅನಿಲ್‌ ವಿಜ್‌ ಅವರ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಲಾಯಿತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅನಿಲ್ ವಿಜ್‌ ಅವರು ಸ್ವಯಂಪ್ರೇರಿತರಾಗಿ ತಮ್ಮ ಮೇಲೆ ಕೊವ್ಯಾಕ್ಸಿನ್‌ ಲಸಿಕೆ ಪ್ರಯೋಗ ಮಾಡಿಸಿಕೊಳ್ಳಲು ಮುಂದಾಗಿದ್ದರು.

ADVERTISEMENT

ಮನುಷ್ಯನ ಮೇಲೆ ಲಸಿಕೆಯ ಪ್ರಯೋಗ ನಡೆಸಲು ಭಾರತ್ ಬಯೊಟೆಕ್‍ಗೆ ಭಾರತದ ಔಷಧ ನಿಯಂತ್ರಕ ಸಂಸ್ಥೆಯಿಂದ ಇತ್ತೀಚೆಗೆ ಅನುಮೋದನೆ ದೊರೆತಿತ್ತು. ಕೊರೊನಾ ಚಿಕಿತ್ಸೆಗಾಗಿ ಸದ್ಯ ಭಾರತದಲ್ಲಿ ಏಳು ವ್ಯಾಕ್ಸಿನ್ ಅಭಿವೃದ್ಧಿ ವಿವಿಧ ಹಂತದಲ್ಲಿದೆ. ಎರಡು ವ್ಯಾಕ್ಸಿನ್‍ಗಳಿಗೆ ಔಷಧ ನಿಯಂತ್ರಣ ಮಹಾಪ್ರಬಂಧಕರು ಅನುಮತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.