ADVERTISEMENT

ಹಿಂದುತ್ವವಾದಿಗಳ ಬೆದರಿಕೆ ತುಷಾರ್‌ ಗಾಂಧಿ ಭಾಷಣ ರದ್ದು

ಪಿಟಿಐ
Published 8 ಫೆಬ್ರುವರಿ 2020, 2:20 IST
Last Updated 8 ಫೆಬ್ರುವರಿ 2020, 2:20 IST
   

ಪುಣೆ: ಹಿಂದುತ್ವವಾದಿ ಗುಂಪುಗಳ ಒತ್ತಡಕ್ಕೆ ಮಣಿದು ‘ಮಹಾತ್ಮ ಗಾಂಧಿ’ ಕುರಿತ ಉಪನ್ಯಾಸಕಾರ್ಯಕ್ರಮದಲ್ಲಿನ ತಮ್ಮ ಭಾಷಣವನ್ನು ರದ್ದುಗೊಳಿಸಲಾಗಿದೆ ಎಂದು ಗಾಂಧಿ ಅವರ ಮೊಮ್ಮಗ ತುಷಾರ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದ ಮಾಡ್ರನ್‌ ಕಾಲೇಜಿನಲ್ಲಿ ಶುಕ್ರವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಲ್ಲದೆ, ನನ್ನ ಭಾಷಣಕ್ಕೆ ಅವಕಾಶ ನೀಡಬಾರದು ಎಂದು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಮಂಡಳಿ ಭಾಗವಹಿಸದಂತೆ ಸೂಚಿಸಿದೆ ಎಂದು ಹೇಳಿದ್ದಾರೆ.

‘ಉಪನ್ಯಾಸ ಕಾರ್ಯಕ್ರಮದಲ್ಲಿ ಯಾರೂ ರಾಜಕೀಯ ಹೇಳಿಕೆ ನೀಡಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಮಂಡಳಿಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಬಾಪೂ ಕುರಿತು ಮಾತನಾಡಲು ಕಾಲೇಜು ಆಹ್ವಾನಿಸಿತ್ತು. ನಾನು ಭಾಗವಹಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ‘ಪತಿತಪಾವನ ಸಂಸ್ಥಾ’ ಬೆದರಿಕೆ ಹಾಕಿತ್ತು. ‘ಗೋಲಿಮಾರೋ ಗ್ಯಾಂಗ್‌’ ಸಕ್ರಿಯವಾಗಿದೆ’ ಎಂದು ತುಷಾರ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.