ಜೈಪುರ (ಪಿಟಿಐ): ರಾಜಸ್ಥಾನದ ಪ್ರತಾಪಗಢದಲ್ಲಿ ಅಂತರರಾಜ್ಯಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಆರೋಪದಡಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಧ್ಯಪ್ರದೇಶದ ನಗ್ದ ಮೂಲದ ಸಲ್ಮಾನ್ ಖಾನ್ (38) ಮತ್ತು ಝಾಲಾವರ್‌ನ ಶಸ್ತ್ರಾಸ್ತ್ರ ಪೂರೈಕೆದಾರ ರಾಕೇಶ್ ಕುಮಾರ್ ಬಂಧಿತ ಆರೋಪಿಗಳು.
ಗ್ಯಾಂಗ್‌ಸ್ಟರ್ ನಿಗ್ರಹ ಕಾರ್ಯ ಪಡೆ (ಎಜಿಟಿಎಫ್ ) ಮತ್ತು ಪ್ರತಾಪಗಢ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, 14 ಅಕ್ರಮ ಬಂದೂಕುಗಳು, 1,860 ಸಜೀವ ಗುಂಡುಗಳು ಮತ್ತು ಛೋಟಾ ಸದ್ರಿ ಪ್ರದೇಶದಿಂದ 10 ಮ್ಯಾಗಝೀನ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ.
‘ಡಿಐಜಿ ಯೋಗೇಶ್ ಯಾದವ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. ಬನ್ಸ್ವಾರ, ಪ್ರತಾಪಗಢ ಮತ್ತು ಚಿತ್ತೋರ್‌ಗಢದಲ್ಲಿ ಪೊಲೀಸ್ ತಂಡಗಳು ವ್ಯಾಪಕ ಬೇಹುಗಾರಿಕೆ ನಡೆಸಿ, ಕಾರ್ಯಾಚರಣೆ ಮಾಡಲಾಯಿತು’ ಎಂದು ಎಜಿಟಿಎಫ್‌ನ ಹೆಚ್ಚುವರಿ ನಿರ್ದೇಶಕ ದಿನೇಶ್ ಎಂ.ಎನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.