ADVERTISEMENT

ಭಾರತ, ಶುದ್ಧ ಇಂಧನದ ಜಾಗತಿಕ ಮಾರುಕಟ್ಟೆ: ಮೋದಿ

ಪಿಟಿಐ
Published 10 ಜುಲೈ 2020, 8:40 IST
Last Updated 10 ಜುಲೈ 2020, 8:40 IST
ಮಧ್ಯಪ್ರದೇಶದ ಸೌರವಿದ್ಯುತ್‌ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ಮೋದಿ ಮಾತನಾಡಿದರು –ಪಿಟಿಐ ಚಿತ್ರ
ಮಧ್ಯಪ್ರದೇಶದ ಸೌರವಿದ್ಯುತ್‌ ಯೋಜನೆಗೆ ಚಾಲನೆ ನೀಡಿ ಪ್ರಧಾನಿ ಮೋದಿ ಮಾತನಾಡಿದರು –ಪಿಟಿಐ ಚಿತ್ರ   

ರೇವ (ಮಧ್ಯಪ್ರದೇಶ): ‘ಶುದ್ಧ ಇಂಧನದ ಆಕರ್ಷಕ ಜಾಗತಿಕ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

ಇಲ್ಲಿನ 750 ಮೆಗಾವಾಟ್‌ ಸಾಮರ್ಥ್ಯದ ಸೌರವಿದ್ಯುತ್‌ ಯೋಜನೆಗೆ, ವಿಡಿಯೊ ಸಂವಾದದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯವು ಶುದ್ಧ ಮತ್ತು ಅಗ್ಗದ ಇಂಧನದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಸೌರ ವಿದ್ಯುತ್‌ ಖಚಿತ, ಶುದ್ಧ ಮತ್ತು ಸುಭದ್ರವಾದುದು. ಅತಿ ಹೆಚ್ಚು ಸೌರವಿದ್ಯುತ್‌ ಉತ್ಪಾದಿಸುವ ಜಗತ್ತಿನ ಅತಿ ದೊಡ್ಡ ಐದು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ’ ಎಂದು ಮೋದಿ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.