ADVERTISEMENT

ಮೌಂಟ್‌ ಲೋಟ್ಸೆ ತುತ್ತತುದಿ ತಲುಪಿ ಇಳಿಯುವಾಗ ಭಾರತದ ಪರ್ವತಾರೋಹಿ ಸಾವು: ವರದಿ

ಪಿಟಿಐ
Published 20 ಮೇ 2025, 13:51 IST
Last Updated 20 ಮೇ 2025, 13:51 IST
   

ಕಠ್ಮಂಡು: ಜಗತ್ತಿನ ನಾಲ್ಕನೇ ಅತಿ ಎತ್ತರದ ಹಿಮಾಲಯ ಪರ್ವತದಲ್ಲಿನ ಮೌಂಟ್‌ ಲೋಟ್ಸೆ ತುತ್ತತುದಿ ತಲುಪಿದ ನಂತರ ಭಾರತೀಯ ಪರ್ವತಾರೋಹಿಯೊಬ್ಬರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ರಾಜಸ್ಥಾನದ ರಾಕೇಶ್‌ ಬಿಷ್ಣೋಯಿ ಅವರು ಲೋಟ್ಸೆ ತುತ್ತತುದಿ ತಲುಪಿ ಸೋಮವಾರ ವಾಪಸ್‌ ಇಳಿಯುವಾಗ ಕ್ಯಾಂಪ್‌–4ರ ಸಮೀಪದ ಯೆಲ್ಲೊ ಬ್ಯಾಂಡ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ‘ಹಿಮಾಲಯನ್‌ ಟೈಮ್ಸ್’ ಪತ್ರಿಕೆಯು ವರದಿ ಮಾಡಿದೆ.

ಲೋಟ್ಸೆ ಪರ್ವತವು ಸಮುದ್ರಮಟ್ಟದಿಂದ 8,516 ಮೀಟರ್‌ ಎತ್ತರದಲ್ಲಿದೆ. ಇದು ನೇಪಾಳ ಮತ್ತು ಟಿಬೆಟ್‌ನ ಸ್ವಾಯತ್ತ ಪ್ರದೇಶದ ಗಡಿಯಲ್ಲಿದೆ.

ADVERTISEMENT
19ನೇ ಬಾರಿ ಎವರೆಸ್ಟ್‌ ಏರಿದ ಬ್ರಿಟಿಷ್ ವ್ಯಕ್ತಿ
ಬ್ರಿಟಿಷ್‌ ಪರ್ವತಾರೋಹಿ ಕೆಂಟನ್‌ ಕೂಲ್‌ (51) ಅವರು 19ನೇ ಬಾರಿಗೆ ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಏರಿದ್ದಾರೆ. ಈ ಮೂಲಕ ಅತಿ ಹೆಚ್ಚು ಬಾರಿ ಎವರೆಸ್ಟ್‌ ಏರಿದ ಶೆರ್ಪಾ ಗೈಡ್‌ ಅಲ್ಲದ ವ್ಯಕ್ತಿ ಎಂಬ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಮಂಗಳವಾರ ವಾಪಸ್‌ ಆದ ಬಳಿಕ ಮಾತನಾಡಿದ ಕೆಂಟನ್ ಅವರು ‘ನನಗೀಗ 51 ವರ್ಷ. 2004ರಿಂದಲೂ ಎವರೆಸ್ಟ್‌ ಏರುತ್ತಿದ್ದೇನೆ. ಮುಂದಿನ ವರ್ಷವೂ ಎವರೆಸ್ಟ್‌ ತುತ್ತತುದಿ ತಲುಪುತ್ತೇನೆ. ನಂತರ ನೇಪಾಳದ ಇತರ ಶಿಖರಗಳನ್ನು ಹತ್ತುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.