ADVERTISEMENT

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರವಿ ಕುಮಾರ್ ಎಸ್

ಪಿಟಿಐ
Published 11 ಅಕ್ಟೋಬರ್ 2022, 14:54 IST
Last Updated 11 ಅಕ್ಟೋಬರ್ 2022, 14:54 IST
ರವಿ ಕುಮಾರ್ ಎಸ್
ರವಿ ಕುಮಾರ್ ಎಸ್   

ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಅಧ್ಯಕ್ಷ ಸ್ಥಾನಕ್ಕೆ ರವಿ ಕುಮಾರ್ ಎಸ್ ಅವರು ರಾಜೀನಾಮೆ ನೀಡಿದ್ದಾರೆ.

ಕಂಪನಿ ಷೇರು ವಿನಿಮಯ ಕೇಂದ್ರಕ್ಕೆ ನೀಡಿದ ಮಾಹಿತಿಯಲ್ಲಿ ಈ ವಿಷಯ ತಿಳಿದು ಬಂದಿದೆ. ಅವರ ರಾಜೀನಾಮೆ ಅಂಗೀಕಾರವಾಗಿದೆ ಅ.11ಮಂಗಳವಾರವೇ ಅವರ ಅಧಿಕಾರದ ಕಡೆಯ ದಿನವಾಗಿದೆ ಎಂದು ಕಂಪನಿ ತಿಳಿಸಿದೆ.

ಇನ್ಫೋಸಿಸ್ ಕಂಪನಿಗೆ ರವಿ ಕುಮಾರ್ ಅವರ ಕೊಡುಗೆಯನ್ನು ಕಂಪನಿ ಸ್ಮರಿಸಿದೆ.

ADVERTISEMENT

2002 ರಲ್ಲಿರವಿ ಕುಮಾರ್ ಅವರು ಇನ್ಫೋಸಿಸ್ ಸೇರಿದ್ದರು. 2017 ರಲ್ಲಿ ಸಿಒಒ ಆಗಿ ಭಡ್ತಿ ಪಡೆದಿದ್ದರು. ಕಳೆದ ವರ್ಷ ಯುಬಿ ಪ್ರವೀಣ್ ರಾವ್ ಅವರಿಂದ ತೆರವಾದ ಅಧ್ಯಕ್ಷ ಸ್ಥಾನವನ್ನು ಅವರು ವಹಿಸಿಕೊಂಡಿದ್ದರು.

ಸಾಫ್ಟ್‌ವೇರ್ ತಜ್ಞರಾಗಿದ್ದ ರವಿ ಕುಮಾರ್ ಅವರು ಇನ್ಫೋಸಿಸ್ ಸೇರುವುದಕ್ಕೂ ಮೊದಲು ಹೋಮಿ ಬಾಬಾ ಅಣುಶಕ್ತಿ ಸಂಸ್ಥೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.