ADVERTISEMENT

ಧೈರ್ಯದಿಂದ ಮುನ್ನುಗ್ಗೋಣ: ಇಸ್ರೊ ವಿಜ್ಞಾನಿಗಳಿಗೆ ವಿಶ್ವಾಸ ತುಂಬಿದ ಮೋದಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 21:58 IST
Last Updated 6 ಸೆಪ್ಟೆಂಬರ್ 2019, 21:58 IST
   

ಭೆಂಗಳೂರು:ವಿಜ್ಞಾನ ಮತ್ತು ಮಾನವ ಜನಾಂಗದ ಅಭ್ಯುಧಯಕ್ಕೆ ನೀವು ಉತ್ತಮ ಸೇವೆ ಸಲ್ಲಿಸಿದ್ದೀರಿ,ನಾವು ಕಲಿಯುತ್ತಿದ್ದೇವೆ,ನಮ್ಮ ಪ್ರಯತ್ನವನ್ನು ಮುಂದುವರಿಸೋಣ. ಧೈರ್ಯದಿಂದ ಮುನ್ನುಗ್ಗೋಣ. ನಾವುಸದಾ ನಿಮ್ಮ ಜತೆಗಿದ್ದೇನೆ. ಸಂಪರ್ಕ ಸದ್ಯ ಸಾಧ್ಯವಾಗಿಲ್ಲ, ಆದರೆ ಭರವಸೆಯಿಂದ ನಿರೀಕ್ಷಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ ನಸುಕಿನಲ್ಲಿ ಚಂದ್ರಯಾನ-2 ವ್ಯೋಮ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಅದರಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಸಾಂತ್ವನದ ಮಾತುಗಳನ್ನು ಹೇಳಿದರು. ಬಳಿಕಇಸ್ರೊ ಆಧ್ಯಕ್ಷರನ್ನು ಬೆನ್ನು ತಟ್ಟಿ ಸಮಾಧಾನಪಡಿಸಿದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು ಒಂದಿಷ್ಟು ಮಾತನಾಡಿ ನಿರ್ಗಮಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.