ADVERTISEMENT

ಸಿಎಂಎಸ್‌–01 ಸಂಪರ್ಕ ಉಪಗ್ರಹ ಯಶಸ್ವಿ ಉಡಾವಣೆ

ಏಜೆನ್ಸೀಸ್
Published 17 ಡಿಸೆಂಬರ್ 2020, 19:45 IST
Last Updated 17 ಡಿಸೆಂಬರ್ 2020, 19:45 IST
ಇಸ್ರೊ
ಇಸ್ರೊ   

ಶ್ರೀಹರಿಕೋಟಾ: ದೇಶದ ನೂತನ ಸಂಪರ್ಕ ಸೇವೆಯ ಉಪಗ್ರಹ ‘ಸಿಎಂಎಸ್ –01’ ಅನ್ನು ಇಸ್ರೊ ಗುರುವಾರ ಇಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿತು.

ಕೋವಿಡ್‌ ಸಂಕಷ್ಟ ಶುರುವಾದ ಬಳಿಕ ಈ ವರ್ಷ ನಡೆಯುತ್ತಿರುವ ಎರಡನೇ ಉಪಗ್ರಹ ಉಡಾವಣೆ ಇದು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ವಿಶ್ವಾಸಾರ್ಹ ಪೊಲಾರ್ ಸ್ಯಾಟಲೈಟ್‌ ಉಡಾವಣಾ ವಾಹಕ –ಪಿಎಸ್‌ಎಲ್‌ವಿ–ಸಿ50– ಉಡಾವಣೆ ನಡೆದ 20 ನಿಮಿಷಗಳ ತರುವಾಯ ಕಕ್ಷೆಗೆ ಉಪಗ್ರಹವನ್ನು ತಲುಪಿಸುವಲ್ಲಿ ಯಶಸ್ವಿಯಾಯಿತು.

ADVERTISEMENT

ಸಿಎಂಎಸ್‌–01 ಎಂಬುದು ಈ ಸರಣಿಯ 42ನೇ ಸಂಪರ್ಕ ಉಪಗ್ರಹವಾಗಿದೆ. ಇದು, ವಿಸ್ತರಿತ ಸಿ–ಬ್ಯಾಂಡ್‌ ಸಂಪರ್ಕ ಸೇವೆಯನ್ನು ಭಾರತ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪಗಳ ಭೌಗೋಳಿಕ ವ್ಯಾಪ್ತಿಗೆ ಅನ್ವಯಿಸಿ ಒದಗಿಸಲಿದೆ. ಈ ಉಪಗ್ರಹದ ಬಾಳಿಕೆಯ ಅವಧಿ ಏಳು ವರ್ಷ ಎಂದು ಇಸ್ರೊ ಮೂಲಗಳು ತಿಳಿಸಿವೆ.

ಪಿಎಸ್‌ಎಲ್‌ವಿ –ಸಿ50 ಎಂಬುದು ಪಿಎಸ್‌ಎಲ್‌ವಿ ಸರಣಿಯ 22ನೇ ಉಡಾವಣಾ ವಾಹಕವಾಗಿದ್ದು, ಒಟ್ಟು ಆರು ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಶ್ರೀಹರಿಕೋಟಾದಿಂದ ನಡೆದ 77ನೇ ಉಪಗ್ರಹ ಉಡಾವಣಾ ಪ್ರಕ್ರಿಯೆ ಇದಾಗಿದೆ.

ನವೆಂಬರ್ 7ರಂದು ಪಿಎಸ್‌ ಎಲ್‌ವಿ–ಸಿ49 ಉಡಾವಣೆ ನಡೆ ದಿತ್ತು. ಈ ಉಡಾವಣೆಯು ಈ ವರ್ಷದ ಎರಡನೇ ಮತ್ತು ವರ್ಷದ ಕಡೆಯ ಉಪಗ್ರಹ ಉಡಾವಣಾ ಪ್ರಕ್ರಿಯೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.