ADVERTISEMENT

ಚಂದ್ರಯಾನ–2ರಿಂದ ಭೂಮಿಯ ಸುಂದರ ಚಿತ್ರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 17:26 IST
Last Updated 4 ಆಗಸ್ಟ್ 2019, 17:26 IST
ಚಂದ್ರಯಾನ–2 ನೌಕೆ ಸೆರೆಹಿಡಿದಿರುವ ಭೂಮಿಯ ಚಿತ್ರಗಳು
ಚಂದ್ರಯಾನ–2 ನೌಕೆ ಸೆರೆಹಿಡಿದಿರುವ ಭೂಮಿಯ ಚಿತ್ರಗಳು   

ಚಂದ್ರಯಾನ–2 ನೌಕೆ ಸೆರೆಹಿಡಿದಿರುವ ಭೂಮಿಯ ನಾಲ್ಕು ಆಕರ್ಷಕ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ಬಿಡುಗಡೆ ಮಾಡಿದೆ.

ಜುಲೈ 22ರಂದು ಉಡ್ಡಯನ ಮಾಡಲಾಗಿದ್ದ ನೌಕೆಯಲ್ಲಿರುವ ಎಲ್16 ಕ್ಯಾಮೆರಾವು ಶನಿವಾರ ಸಂಜೆ 5.34ರ ಸಮಯದಲ್ಲಿ ಸೆರೆಹಿಡಿದಿರುವ ಚಿತ್ರಗಳನ್ನು ಇಸ್ರೊ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಚಂದ್ರಯಾನ–2 ನೌಕೆ ಸೆರೆಹಿಡಿದಿದೆ ಎನ್ನಲಾದ ಚಿತ್ರಗಳು ಇತ್ತೀಚೆಗಷ್ಟೇ ಭಾರಿ ಸುದ್ದಿ ಮಾಡಿದ್ದವು. ಈ ಚಿತ್ರಗಳನ್ನು ನೌಕೆ ಸೆರೆಹಿಡಿದಿಲ್ಲ ಎಂದು ಇಸ್ರೊ ಸ್ಪಷ್ಟಪಡಿಸಿತ್ತು.

ADVERTISEMENT

ಸೆಪ್ಟೆಂಬರ್ ಮೊದಲ ವಾರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುರಕ್ಷಿತವಾಗಿ ಇಳಿಸಲು ಇಸ್ರೊ ಸಜ್ಜಾಗಿದೆ. ಅಮೆರಿಕ, ರಷ್ಯಾ, ಚೀನಾ ಬಳಿಕ ಭಾರತವು ಮೊದಲ ಬಾರಿಗೆ ಸುರಕ್ಷಿತ ಲ್ಯಾಂಡಿಂಗ್‌ಗೆ ಸಿದ್ಧತೆ ನಡೆದಿದೆ. ದಕ್ಷಿಣ ತುದಿಯಲ್ಲಿ ಈವರೆಗೆ ಯಾವ ದೇಶದ ನೌಕೆಯೂ ಇಳಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.