ADVERTISEMENT

ಹಸಿರು ಇಂಧನ ಬಳಕೆ: ಇಸ್ರೊ ಅಧ್ಯಕ್ಷ ಶಿವನ್‌

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 19:51 IST
Last Updated 26 ಮಾರ್ಚ್ 2021, 19:51 IST
ಕೆ.ಶಿವನ್‌
ಕೆ.ಶಿವನ್‌   

ನವದೆಹಲಿ: ಭವಿಷ್ಯದ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಹಸಿರು ಇಂಧನವನ್ನೇ ಬಳಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಇಸ್ರೊ ಮುಖ್ಯಸ್ಥ ಕೆ.ಶಿವನ್‌ ಶುಕ್ರವಾರ ಹೇಳಿದರು.

‘ಇಂಡಿಯಾ ಎಕನಾಮಿಕ್‌ ಕಾಂಕ್ಲೇವ್‌’ನಲ್ಲಿ ಮಾತನಾಡಿದ ಅವರು, ‘ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮ ‘ಗಗನಯಾನ’ದಲ್ಲಿ ಹಸಿರು ಇಂಧನ ಬಳಕೆ ಮಾಡುವ ಸಾಧ್ಯತೆಯೂ ಇದೆ’ ಎಂದರು.

‘ಗಗನಯಾನ’ ಕಾರ್ಯಕ್ರಮಕ್ಕಾಗಿ ಕೊಕೊ ದ್ವೀಪದಲ್ಲಿ ಭೂಕೇಂದ್ರವೊಂದನ್ನು ಸ್ಥಾಪಿಸುವ ಸಂಬಂಧ ಆಸ್ಟ್ರೇಲಿಯಾದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.