ADVERTISEMENT

ಜಿಂದಾಲ್: ದಿನವೂ 1 ಸಾವಿರ ಟನ್‌ ಆಮ್ಲಜನಕ ಪೂರೈಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 21:19 IST
Last Updated 1 ಮೇ 2021, 21:19 IST

ಬಳ್ಳಾರಿ: ‘ಜೆಎಸ್‌ಡಬ್ಲ್ಯೂ ಸ್ಟೀಲ್‌ ಸಂಸ್ಥೆಯು ಪ್ರತಿ ದಿನ 1 ಸಾವಿರ ಟನ್‌ ವೈದ್ಯಕೀಯ ಆಮ್ಲಜನಕವನ್ನು ಉತ್ಪಾದಿಸುತ್ತಿದೆ’ ಎಂದು ಜೆಎಸ್‌ಡಬ್ಲ್ಯೂ ಸ್ಟೀಲ್‌ ವಿಜಯನಗರ ವರ್ಕ್ಸ್‌ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ ತಿಳಿಸಿದ್ದಾರೆ.

‘ಏಪ್ರಿಲ್‌ ಆರಂಭದಲ್ಲಿ ಪ್ರತಿದಿನ ಸರಾಸರಿ 200 ಟನ್‌ ಆಮ್ಲಜನಕವನ್ನು ಉತ್ಪಾದಿಸುತ್ತಿತ್ತು. ನಂತರ ಈ ಪ್ರಮಾಣ 680 ಟನ್‌ಗೆ ಏರಿತ್ತು. ಸಂಸ್ಥೆಯು ಈಗ ಪ್ರತಿದಿನ 1 ಸಾವಿರ ಟನ್‌ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದು, ಏಪ್ರಿಲ್‌ ತಿಂಗಳಲ್ಲಿ ಸಂಸ್ಥೆಯು ಸುಮಾರು 20 ಸಾವಿರ ಟನ್‌ನಷ್ಟು ಆಮ್ಲಜನಕವನ್ನು ಪೂರೈಸಿದೆ’ ಎಂದು ತಿಳಿಸಿದ್ದಾರೆ.

‘ಸಂಸ್ಥೆಯು ಕರ್ನಾಟಕವಷ್ಟೇ ಅಲ್ಲದೆ ಮಹಾರಾಷ್ಟ್ರ ಮತ್ತು ತಮಿಳುನಾಡು ಘಟಕಗಳಿಂದಲೂ ಆಮ್ಲಜನಕವನ್ನು ಉತ್ಪಾದಿಸುತ್ತಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.