ADVERTISEMENT

ಮಿಜೋರಾಂ: ತಿಂಗಳಲ್ಲಿ 22 ಬಾರಿ ಭೂಕಂಪನ

ಪಿಟಿಐ
Published 23 ಜುಲೈ 2020, 7:27 IST
Last Updated 23 ಜುಲೈ 2020, 7:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಐಜ್ವಾಲ್: ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡಿರುವ ಮಿಜೋರಾಂನ ಚಂಪೈ ಜಿಲ್ಲೆಯ ಕೆಲವೆಡೆ ಈ ತಿಂಗಳು ಹಲವು ಭಾರಿ ಭೂಕಂಪನದ ಅನುಭವವಾಗಿದೆ. ಇದರಿಂದ ಜನ ಭೀತಿಯಿಂದ ತಾತ್ಕಾಲಿಕ ಶೆಡ್‍ಗಳಲ್ಲಿ ರಾತ್ರಿಗಳನ್ನು ಕಳೆಯುವಂತಾಗಿದೆ.

ಜೂನ್‍ 22ರಿಂದ ಇಲ್ಲಿಯವರೆಗೆ ಸುಮಾರು 22 ಭಾರಿ ಗಡಿಗೆ ಹೊಂದಿಕೊಂಡಿರುವ ಚಂಪೈ, ಸೈತುಲ್, ಸಿಯಾಹ, ಸೆರ್ಚಿಪ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 4.2 ರಿಂದ 5.5ರಷ್ಟು ದಾಖಲಾಗಿದೆ. ಈ ಪೈಕಿ ಚಂಪಾಯಿಯಲ್ಲಿ ಪರಿಣಾಮ ತೀವ್ರವಾಗಿದೆ.

ಚಂಪೈ ಜಿಲ್ಲಾಧಿಕಾರಿ ಮಾರಿಯಾ ಸಿ.ಟಿ.ಜುವಾಲಿ ಅವರು, ಭೂಕಂಪನದ ಭೀತಿ ಹೆಚ್ಚಿರುವ ಕಡೆ ತಾತ್ಕಾಲಿಕವಾಗಿ ಶೆಡ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ನೀರಿನ ವ್ಯವಸ್ಥೆ, ಸೌರ ದೀಪದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ADVERTISEMENT

ಜನರಿಗೆ ಆಹಾರ ಸೌಲಭ್ಯವನ್ನು ಒದಗಿಸಲಾಗಿದೆ. ಈ ಭಾಗದಲ್ಲಿ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ಭೂಕಂಪನದ ಅನುಭವವಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.