ADVERTISEMENT

ಜೋಶಿಮಠ ಪ್ರಕರಣ ಬೆನ್ನಲ್ಲೇ, ಅಲೀಗಢದಲ್ಲಿ ಮನೆಯ ಗೋಡೆಗಳಲ್ಲಿ ಬಿರುಕು

ಅಲೀಗಢದ ಹಲವು ಮನೆಗಳಲ್ಲಿ ಬಿರುಕು, ಸ್ಥಳೀಯರಲ್ಲಿ ಆತಂಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2023, 3:14 IST
Last Updated 11 ಜನವರಿ 2023, 3:14 IST
   

ಅಲೀಗಢ: ಉತ್ತರಾಖಂಡದ ಜೋಶಿಮಠ ಪ್ರದೇಶದಲ್ಲಿ ಭಾರಿ ಭೂ ಕುಸಿತದ ಪ್ರಕರಣ ವರದಿಯಾದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದ ಅಲೀಗಢ ಪ್ರದೇಶದ ಹಲವು ಮನೆಗಳಲ್ಲಿ ಬಿರುಕು ಕಂಡು ಬಂದಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

‘ಕಳೆದ ಕೆಲವು ದಿನಗಳಿಂದ ನಮ್ಮ ಪ್ರದೇಶದ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದು ನಮಗೆ ಭಯ ಉಂಟು ಮಾಡಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಿದರೆ, ಭರವಸೆ ನೀಡುತ್ತಾರೆ ಹೊರತು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮನೆ ಕುಸಿಯುವ ಆತಂಕದಲ್ಲಿ ನಾವಿದ್ದೇವೆ‘ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಇಲ್ಲಿ ಪೈಪ್‌ಲೈನ್‌ಗಳನ್ನು ಹಾಕಲಾಗಿದ್ದು, ಅವುಗಳು ಈಗ ಸೋರುತ್ತಿವೆ. ಹೀಗಾಗಿ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ ಎನ್ನುವುದು ಸ್ಥಳೀಯರ ಆರೋಪ.

ADVERTISEMENT

‘ಘಟನೆ ನಡೆದು 3–4 ದಿನಗಳಾಗಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಪ್ರಯೋಜನ ಆಗಿಲ್ಲ . ಅನಿವಾರ್ಯವಾಗಿ ಭಯದಿಂದಲೇ ಬದುಕಬೇಕಾಗಿದೆ‘ ಎಂದು ಸ್ಥಳೀಯರಾದ ಅಸ್ಫಾ ಮಶ್ರೂರ್ ಎನ್ನುವವರ ಮಾತು.

ಪ್ರಕರಣ ಸಂಬಂಧ ನಗರ ಪಾಲಿಕೆ ಆಯುಕ್ತರನ್ನು ಸಂಪರ್ಕಿಸಲಾಗಿದ್ದು, ಸಂಬಂಧಪಟ್ಟ ಇಲಾಖೆ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.