ಸುಪ್ರೀಂ ಕೋರ್ಟ್
ನವದೆಹಲಿ: ‘ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್ ವಿ ವಿಕಿಮೀಡಿಯಾ ಫೌಂಡೇಶನ್’ ಶೀರ್ಷಿಕೆಯ ವಿಕಿಪೀಡಿಯ ಪುಟವನ್ನು ತೆಗೆದುಹಾಕುವಂತೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ವಿಕಿಮೀಡಿಯಾ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯ ಕುರಿತು ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ‘ತಮಗೆ ಇಷ್ಟವಾಗದ ಕಾರಣ ನೀಡಿ ವಿಷಯವನ್ನು ತೆಗೆದುಹಾಕುವಂತೆ ನ್ಯಾಯಾಧೀಶರು ಆದೇಶ ನೀಡಲು ಆಗದು. ಯಾವುದೇ ವಿಷಯವು ಚರ್ಚೆಯಾಗಬಾರದೆಂದು ಹೇಳಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಅದು ಬೆಚ್ಚಿಬೀಳಿಸುವ ಪರಿಣಾಮವನ್ನು ಬೀರುತ್ತದೆ. ನಾವು ಮುಕ್ತ ನ್ಯಾಯ ವ್ಯವಸ್ಥೆಯನ್ನು ಹೊಂದಿದ್ದೇವೆ’ ಎಂದು ಹೇಳಿದೆ.
ವಿಕಿಮೀಡಿಯಾ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ವಿಕಿಪೀಡಿಯಾ ಪುಟದಲ್ಲಿರುವ ಮಾಹಿತಿಯು ವೇದಿಕೆಗೆ ಮೂಲವಲ್ಲ. ಆದರೆ, ಅದನ್ನು ಇತರ ಮಾಧ್ಯಮಗಳಿಂದ ಪಡೆಯಲಾಗಿದೆ ಎಂದು ವಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.