ADVERTISEMENT

ಕೇರಳ ಭಯೋತ್ಪಾದನೆಯ ‘ಹಾಟ್ ಸ್ಪಾಟ್‘: ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2022, 1:55 IST
Last Updated 27 ಸೆಪ್ಟೆಂಬರ್ 2022, 1:55 IST
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ   

ತಿರುವನಂತಪುರಂ: ಕೇರಳ ರಾಜ್ಯ ತೀವ್ರವಾದಿ ಮತ್ತು ಭಯೋತ್ಪಾದನೆ ವಿಷಯಗಳಲ್ಲಿ ‘ಹಾಟ್‌ ಸ್ಪಾಟ್‌‘ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷಜೆಪಿ ನಡ್ಡಾ ಹೇಳಿದ್ದಾರೆ.

ಕೇರಳ ಪ್ರವಾಸದಲ್ಲಿರುವ ಅವರು ಇಲ್ಲಿನ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಕೇರಳದಲ್ಲಿ ಹಿಂಸೆ,ಕೋಮು ಉದ್ವಿಗ್ನತೆ ಹೆಚ್ಚುತ್ತಿದ್ದು ದೇವರ ನಾಡು ತೀವ್ರವಾದಿಅಂಶಗಳಲ್ಲಿ‘ಹಾಟ್‌ ಸ್ಪಾಟ್‌‘ ಆಗಿದೆ. ಇಲ್ಲಿ ನಾಗರಿಕರಬದುಕು ಸುರಕ್ಷಿತವಾಗಿಲ್ಲ ಎಂದು ನಡ್ಡಾ ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಟುಂಬ ಕೂಡ ಸರ್ಕಾರದಲ್ಲಿ ತೊಡಗಿಕೊಂಡಿದೆ. ಅವರ ಮಗಳು ಮತ್ತು ಅಳಿಯ ಸರ್ಕಾರದಲ್ಲಿ ಹಸ್ತಾಕ್ಷೇಪ ಮಾಡುತ್ತಿದ್ದಾರೆ. ಇಲ್ಲಿ ಇರುವುದು ಅಧಿಕೃತವಾಗಿ ಕುಟುಂಬ ಸರ್ಕಾರ ಎಂದು ನಡ್ಡಾ ಆರೋಪ ಮಾಡಿದ್ದಾರೆ.

ADVERTISEMENT

ಕೇರಳದಲ್ಲಿ ಹಿಂಸಾಚಾರ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸುವವರಿಗೆ ಮತ್ತು ಇದಕ್ಕೆ ಕುಮ್ಮಕ್ಕು ಕೊಡುವವರಿಗೆಸರ್ಕಾರ ಮೌನ ಬೆಂಬಲ ನೀಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ವಿಶ್ವವಿದ್ಯಾಲಯಗಳು ಸರಿದಂತೆ ವಿವಿಧ ಸರ್ಕಾರಿನೇಮಕಾತಿಗಳಲ್ಲಿ ಸರ್ಕಾರ ಸ್ವಜನಪಕ್ಷಪಾತ ಮಾಡುತ್ತಿದೆ. ಲೋಕಾಯುಕ್ತವನ್ನು ದುರ್ಬಲಗೊಳಿಸುವ ಮೂಲಕ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೇಶದ ಎಲ್ಲಾ ರಾಜ್ಯಗಳಲ್ಲಿ ಇರುವ ವಿರೋಧ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ವಿರುದ್ಧ ಅವರು ಕಿಡಿಕಾರಿದರು. ಹರಿಯಾಣದಲ್ಲಿಮಾಜಿ ಮುಖ್ಯಮಂತ್ರಿ ದೇವಿಲಾಲ್ ಜನ್ಮದಿನ ಆಚರಿಸಲು ಸೇರಿದ್ದ ವಿರೋಧ ಪಕ್ಷಗಳು ಹಾಗೂ ಪ್ರಾದೇಶಿಕ ಪಕ್ಷಗಳನ್ನು ಅವರು ಇದೇ ವೇಳೆ ಟೀಕೆ ಮಾಡಿದರು.

ಈ ಪಕ್ಷಗಳು ಎರಡು ವಿಷಯಗಳಲ್ಲಿ ಸಾಮಾನ್ಯವಾಗಿವೆ. ಒಂದು ಕುಟುಂಬ ರಾಜಕಾರಣದಲ್ಲಿ ತೊಡಗಿರುವುದು ಮತ್ತೊಂದು ಭ್ರಷ್ಟಾಚಾರ ಮಾತನಾಡುತ್ತಿರುವುದುಎಂದು ಹೇಳಿದರು.

ಕೇರಳ ಸರ್ಕಾರ ಆರ್ಥಿಕ ಶಿಸ್ತು ಕಾಪಾಡುತ್ತಿಲ್ಲ ಎಂದು ನಡ್ಡಾಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.