ADVERTISEMENT

ಧರ್ಮಕ್ಕೆ ವಿರುದ್ಧ ಜೀವನ: ಕ್ರೈಸ್ತ ಸನ್ಯಾಸಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 14:03 IST
Last Updated 9 ಜನವರಿ 2019, 14:03 IST
   

ಕೊಚ್ಚಿ (ಪಿಟಿಐ): ಕ್ರೈಸ್ತ ಧರ್ಮದ ತತ್ವಗಳಿಗೆ ವಿರುದ್ಧವಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವ ಕಾರಣಕ್ಕೆ ಕ್ರೈಸ್ತ ಸನ್ಯಾಸಿನಿಗೆ ಅಲುವದ ಕ್ರೈಸ್ತ ಧರ್ಮ ಸಭೆಯು ನೋಟಿಸ್‌ ಜಾರಿ ಮಾಡಿದೆ.

ಈ ಸನ್ಯಾಸಿನಿ ತಮ್ಮ ಮೇಲಿನ ಅನುಮತಿ ಪಡೆಯದೆ ಪದ್ಯ ಪ್ರಕಟಿಸಿದ್ದರು, ಕಾರು ಖರೀದಿಸಿದ್ದರು ಹಾಗೂ ಅತ್ಯಾಚಾರ ಪ್ರಕರಣದ ಆಪಾದನೆ ಎದುರಿಸುತ್ತಿದ್ದ ಜಲಂಧರ್‌ ಡಿಯೊಸಿಸ್‌ನ ಬಿಷಪ್‌ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ನೋಟಿಸ್‌ ನೀಡಲಾಗಿದೆ ಎನ್ನಲಾಗಿದೆ.

ಆಪಾದನೆಗೆ ಗುರಿಯಾಗಿರುವ ಸೆಂಟ್‌ ಮೇರಿ ಪ್ರಾಂತ್ಯಕ್ಕೆ ಸೇರಿದ ಮನಂತವಾಡಿಯ ಸನ್ಯಾಸಿನಿ ಲುಸಿ ಕಲಾಪುರ ಅವರು ಧಾರ್ಮಿಕ ತತ್ವಗಳಿಗೆ ವಿರುದ್ಧವಾದ ಜೀವನ ನಡೆಸುವ ಮೂಲಕ, ಧರ್ಮಸಭೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಧರ್ಮಸಭೆ ಮುಖ್ಯಸ್ಥ ಫ್ರಾನ್ಸಿಸನ್‌ ನೋಟಿಸ್‌ನಲ್ಲಿ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.