ADVERTISEMENT

ಕೇರಳ: ಶೇ 100 ಹಿಂದಿ ಸಾಕ್ಷರತೆ ಸಾಧಿಸುವ ಕಡೆ ಸಾಗುತ್ತಿರುವ ಗ್ರಾಮ

ಪಿಟಿಐ
Published 23 ಅಕ್ಟೋಬರ್ 2022, 11:16 IST
Last Updated 23 ಅಕ್ಟೋಬರ್ 2022, 11:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಯಿಕ್ಕೋಡ್‌ : ಕೇರಳದ ಗ್ರಾಮವೊಂದು ಸದ್ಯದಲ್ಲೇ ಶೇ 100ರಷ್ಟು ಹಿಂದಿ ಸಾಕ್ಷರತೆ ಸಾಧಿಸುವತ್ತ ಮುನ್ನೆಡೆದಿದೆ. ಕೇರಳ ಮತ್ತು ತಮಿಳುನಾಡು ರಾಜ್ಯಗಳು ಹಿಂದಿ ಹೇರಿಕೆಯ ಪ್ರಯತ್ನವನ್ನು ಕಟುವಾಗಿ ವಿರೋಧಿಸುತ್ತಿರುವ ನಡುವೆಯೇ ಚೆಲನ್ನೂರ್‌ ಗ್ರಾಮ ಪಂಚಾಯತಿಯು ಗ್ರಾಮಸ್ಥರಿಗೆ ಹಿಂದಿ ಕಲಿಸುವ ಯೋಜನೆಯನ್ನು ಹಾಕಿಕೊಂಡಿದೆ.

ಉತ್ತರ ಭಾರತದಿಂದ ಇಲ್ಲಿಗೆದೊಡ್ಡ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಆಗಮಿಸಿದ್ದಾರೆ. ಅವರ ಜೊತೆ ಸಂವಹನ ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯರಿಗೆ ಹಿಂದಿ ಕಲಿಸುವ ಯೋಜನೆಯನ್ನು ಗ್ರಾಮ ಪಂಚಾಯತಿ ಹಮ್ಮಿಕೊಂಡಿದೆ. ಮುಂದಿನ ಗಣರಾಜ್ಯೋತ್ಸವ ವೇಳೆಗೆ ಇದನ್ನು ಶೇ 100ರಷ್ಟು ಹಿಂದಿ ಸಾಕ್ಷರತೆ ಹೊಂದಿರುವ ಗ್ರಾಮ ಪಂಚಾಯತಿ ಎಂದು ಘೋಷಿಸುವ ಉದ್ದೇಶವನ್ನು ಹೊಂದಲಾಗಿದೆ. ಸಂಪೂರ್ಣ ಹಿಂದಿ ಸಾಕ್ಷರತೆ ಹೊಂದಿರುವ ಕೇರಳದ ಪ್ರಥಮ ಗ್ರಾಮ ಪಂಚಾಯತಿ ಇದಾಗಲಿದೆ ಎಂದು ಪಂಚಾಯತಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯ ಮಾನವ ಸಂಪನ್ಮೂಲ ಮತ್ತು ಸೀಮಿತ ನಿಧಿಯನ್ನು ಬಳಸಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ವಯಸ್ಸು, ಲಿಂಗ ಬೇಧವಿಲ್ಲದೇ ಎಲ್ಲರೂ ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ADVERTISEMENT

ಗ್ರಾಮದ ಜಾನಕಿ ಅಮ್ಮ (72) ಎಂಬ ವೃದ್ಧೆ ತಮಗೆ ಕಲಿಸಿರುವ ಒಂದು ವಾಕ್ಯವನ್ನು ಪುನರಾವರ್ತಿಸುತ್ತಕಲಿಕೆಯನ್ನು ಆನಂದಿಸುತ್ತಿರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.