ADVERTISEMENT

ಕೇರಳ: ನಾಲ್ಕು ವರ್ಷಗಳ ನಂತರ ಮಲಂಬುಳ ಅಣೆಕಟ್ಟಿನಿಂದ ಹರಿಯಿತು ನೀರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2018, 7:13 IST
Last Updated 1 ಆಗಸ್ಟ್ 2018, 7:13 IST
ಮಲಂಬುಳ ಅಣೆಕಟ್ಟು ( ಕೃಪೆ: ಟ್ವಿಟರ್)
ಮಲಂಬುಳ ಅಣೆಕಟ್ಟು ( ಕೃಪೆ: ಟ್ವಿಟರ್)   

ಪಾಲಕ್ಕಾಡ್ : ನಾಲ್ಕು ವರ್ಷಗಳ ನಂತರ ಕೇರಳದ ಮಲಂಬುಳ ಅಣೆಕಟ್ಟಿನ ಸ್ಪಿಲ್ ವೇ ಶಟರ್ ತೆರೆಯಲಾಗಿದೆ. ಬುಧವಾರ ಬೆಳಗ್ಗೆ 11.45ಕ್ಕೆ ಮೊದಲ ಹಂತದಲ್ಲಿ ಒಂದೊಂದೇ ಶಟರ್ ತೆರೆಯಲಾಗಿದೆ.ಮಲಂಬುಳ ಅಣೆಕಟ್ಟಿಗೆ ನಾಲ್ಕುಶಟರ್ ಇದ್ದು, ಹಂತ ಹಂತವಾಗಿ ನೀರು ಬಿಡಲಾಗುತ್ತಿದೆ.

115.06 ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟಿನಲ್ಲಿ ನೀರಿನ ಮಟ್ಟ 114.86 ಮೀಟರ್ ತಲುಪಿದ್ದರಿಂದ ಶಟರ್ ತೆರೆದು ನೀರು ಬಿಡಲಾಗಿದೆ.ಇಲ್ಲಿಂದ ಬಿಟ್ಟ ನೀರು ಮುಕ್ಕೇಪ್ಪುಳ ಮೂಲಕ ಕಲ್ಪತ್ತಿಪ್ಪುಳ ಸೇರಿ ಪರಳಿಯಿಂದ ಭಾರತಪ್ಪುಳಕ್ಕೆ ಸೇರಲಿದೆ.

ಈ ನದಿಯ ದಡದಲ್ಲಿ ವಾಸಿಸುವವರು ಎಚ್ಚರ ವಹಿಸಬೇಕೆಂದು ಅಧಿಕೃತರು ಹೇಳಿದ್ದಾರೆ. ಇನ್ನೆರಡು ದಿನಗಳಲ್ಲಿ ಕೇರಳದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಶುಕ್ರವಾರ ಶಟರ್ ಮುಚ್ಚುವ ಸಾಧ್ಯತೆ ಇದೆ.

ADVERTISEMENT

ಈ ಹಿಂದೆ 2013, 2014ರಲ್ಲಿ ನೀರಿನ ಮಟ್ಟ ಜಾಸ್ತಿಯಾದಾಗ ಶಟರ್ ತೆರೆಯಲಾಗಿತ್ತು. 2013ರಲ್ಲಿ ಆಗಸ್ಟ್ 15ರಂದು ನವಂಬರ್ 8ರ ವರೆಗೆ, 2014ರಲ್ಲಿ ಸೆಪ್ಟೆಂಬರ್ 6- ಅಕ್ಟೋಬರ್ 27ರವರೆಗೆ ಅಣೆಕಟ್ಟಿನ ಶಟರ್ ತೆರೆಯಲಾಗಿತ್ತು. ನಂತರದ ವರ್ಷಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿತ್ತು. ಕಳೆದ ವರ್ಷ ಎರಡನೇ ಬೇಸಾಯಕ್ಕೆ 90ದಿನಗಳ ಕಾಲ ನೀರು ಬೇಕು ಎಂದು ರೈತರು ಕೇಳಿದ್ದರೂ ಅಷ್ಟು ದಿನ ಹರಿಬಿಡವಷ್ಟು ನೀರು ಅಣೆಕಟ್ಟಿನಲ್ಲಿರಲಿಲ್ಲ. 2011 ಮತ್ತು 2013ರ ಜುಲೈ ತಿಂಗಳಲ್ಲಿ ನೀರಿನ ಮಟ್ಟ 113 ಮೀಟರ್ ಇತ್ತು.

ಸೆಲ್ಫಿಗೆ ನಿಷೇಧ
ಮಲಂಬುಳ ಅಣೆಕಟ್ಟು ತೆರೆದು ಬಿಡುವ ಹೊತ್ತಲ್ಲಿ ಹತ್ತಿರದ ನದಿ ಬಳಿ, ಸೇತುವೆಯಲ್ಲಿ ಗುಂಪು ಸೇರುವುದು, ಸೆಲ್ಫಿ ತೆಗೆಯುವುದು ನಿಷೇಧಿಸಲಾಗಿದೆಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಡಿಟಿಪಿಸಿ) ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.