ADVERTISEMENT

‘ಮೋದಿ ಸುಳ್ಳಿನ ಚೌಕೀದಾರ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 18:21 IST
Last Updated 4 ಏಪ್ರಿಲ್ 2019, 18:21 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕೊತ್ತ: ಸುಳ್ಳು ಭರವಸೆಗಳನ್ನು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು‘ಸುಳ್ಳಿನ ಚೌಕೀದಾರ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಕೂಚ್ ಬಿಹಾರ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ರ್‍ಯಾಲಿಯಲ್ಲಿ ಮಾತನಾಡಿದ ಮಮತಾ, ‘ಕೆಲವರು ಚೌಕೀದಾರ ಕಳ್ಳ ಎಂದು ಹೇಳುತ್ತಾರೆ. ಚೌಕೀದಾರ ಸುಳ್ಳುಗಾರ ಎಂದು ನಾನು ಹೇಳುತ್ತೇನೆ. ಅವರು ತಮ್ಮ ಜೀವನದಲ್ಲಿ ಎಂದೂ ಸತ್ಯ ನುಡಿದಿಲ್ಲ’ ಎಂದಿದ್ದಾರೆ. ವಿದೇಶದ ಕಪ್ಪುಹಣ ವಾಪಸ್ ತರುವ ಹಾಗೂ ಎಲ್ಲರ ಖಾತೆಗಳೂ ₹15 ಲಕ್ಷ ಹಣ ಠೇವಣಿ ಇಡುವ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿದ ಮಮತಾ, ಮತ ಪಡೆಯುವ ಏಕೈಕ ಉದ್ದೇಶದಿಂದ ಅವರು ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.

‘ಚೌಕೀದಾರ ಸುಳ್ಳುಗಾರ ಎಂದು ಜನರು ಹೇಳುತ್ತಿದ್ದಾರೆ. ಅವರು ಹೇಳಿದ್ದ ₹15 ಲಕ್ಷ ಹಣ ಎಲ್ಲಿದೆ? ನಿರುದ್ಯೋಗಿಗಳಿಗೆ ಏಕೆ ಉದ್ಯೋಗ ಸಿಗುತ್ತಿಲ್ಲ? 12 ಸಾವಿರ ರೈತರು ಏಕೆ ಆತ್ಮಹತ್ಯೆ ಮಾಡಿ ಕೊಂಡರು? ಗೋರಕ್ಷಣೆ ಹೆಸರಲ್ಲಿ ಜನ ಏಕೆ ಹತ್ಯೆಯಾಗುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.