ಹೈದರಾಬಾದ್ (ಪಿಟಿಐ): 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಅಪರಾಧಿಗೆ ತೆಲಂಗಾಣದ ನಲ್ಗೊಂಡ ಜಿಲ್ಲಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
24 ವರ್ಷದ ಆರೋಪಿ ವಿರುದ್ಧ 2013ರ ಏಪ್ರಿಲ್‌ನಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿತ್ತು. 12 ವರ್ಷಗಳ ಬಳಿಕ ನ್ಯಾಯಾಲಯದ ತೀರ್ಮಾನ ಪ್ರಕಟವಾಗಿದೆ. ಅಪರಾಧಿಯು ಕಿವುಡ ಮತ್ತು ಮೂಗನಾಗಿದ್ದರಿಂದ ವಿಚಾರಣೆ ವೇಳೆ ದುಭಾಷಿಯ ನೆರವು ಒದಗಿಸಲಾಗಿತ್ತು.
ಅಪರಾಧಿಯು, ಸಂತ್ರಸ್ತೆ ಬಾಲಕಿ ವಾಸವಿದ್ದ ಕಾಲೊನಿಯಲ್ಲೇ ನೆಲೆಸಿದ್ದ. ಕೃತ್ಯದ ಬಳಿಕ ಮೃತದೇಹವನ್ನು ಚರಂಡಿಗೆ ಎಸೆದಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.