ADVERTISEMENT

ಮಥುರಾದ ಮಸೀದಿ ಆವರಣದಲ್ಲಿ ಶ್ರೀ ಕೃಷ್ಣನಿಗೆ ಜಲಾಭಿಷೇಕ: ಅರ್ಜಿ ತಿರಸ್ಕಾರ

ಪಿಟಿಐ
Published 3 ಆಗಸ್ಟ್ 2022, 16:25 IST
Last Updated 3 ಆಗಸ್ಟ್ 2022, 16:25 IST
ಶಾಹಿ ಈದ್ಗಾ ಮಸೀದಿ ಮತ್ತು ಕಟ್ರಾ ಕೇಶವ ದೇವ ದೇವಸ್ಥಾನ | ಪಿಟಿಐ ಚಿತ್ರ
ಶಾಹಿ ಈದ್ಗಾ ಮಸೀದಿ ಮತ್ತು ಕಟ್ರಾ ಕೇಶವ ದೇವ ದೇವಸ್ಥಾನ | ಪಿಟಿಐ ಚಿತ್ರ   

ಮಥುರಾ, ಉತ್ತರ ಪ್ರದೇಶ: ಶಾಹಿ ಈದ್ಗಾ ಮಸೀದಿಯ ಆವರಣದಲ್ಲಿ ಶ್ರೀ ಕೃಷ್ಣ ದೇವರಿಗೆ ಜಲಾಭಿಷೇಕ ನಡೆಸಲು ಅವಕಾಶ ಕೋರಿ ಸಲ್ಲಿಕೆಯಾಗಿದ್ದ ಪುನರ್‌ಪರಿಶೀಲನಾ ಅರ್ಜಿಯನ್ನು ಮಥುರಾ ಜಿಲ್ಲಾ ಕೋರ್ಟ್‌ ತಿರಸ್ಕರಿಸಿದೆ. ಕೃಷ್ಣನ ಜನ್ಮಸ್ಥಳದಲ್ಲಿ ಮಸೀದಿಯನ್ನು ಕಟ್ಟಲಾಗಿದೆ ಎಂಬುದು ಅರ್ಜಿದಾರರ ನಂಬಿಕೆಯಾಗಿದೆ.

ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಖಜಾಂಜಿ ದಿನೇಶ್‌ ಶರ್ಮಾ ಅವರು ಪುನರ್‌ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು. ಮಸೀದಿಯ ಒಳಗೆ ಶ್ರೀ ಕೃಷ್ಣನ ನಿಜವಾದ ಜನ್ಮಸ್ಥಳವಿದೆ. ಜಲಾಭಿಷೇಕ ನಡೆಸಲು ಅನುವು ಮಾಡಿಕೊಡಬೇಕು ಎಂದು ಶರ್ಮಾ ಅರ್ಜಿಯಲ್ಲಿ ಹಕ್ಕೊತ್ತಾಯ ಮಾಡಿದ್ದರು.

ಶ್ರೀಕೃಷ್ಣ ಜನ್ಮಭೂಮಿ ಮಥುರಾದ ಕಟ್ರಾ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಶಾಹಿ ಮಸೀದಿ ಈದ್ಗಾ ಸ್ಥಳಾಂತರಿಸಲು ಕೋರಿ ಹಲವಾರು ಅರ್ಜಿಗಳು ಮಥುರಾ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.