ADVERTISEMENT

ಮುಖ್ಯಮಂತ್ರಿ ಹೇಳಿಕೆಗೆ ಕಿರಣ್ ಬೇಡಿ ಕಿಡಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 20:25 IST
Last Updated 1 ನವೆಂಬರ್ 2019, 20:25 IST

ಪುದುಚೇರಿ (ಪಿಟಿಐ): ‘ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮಾಡಿರುವ ಆರೋಪ ಅಸಂಸದೀಯ, ಅನಿಯಂತ್ರಿತ, ಅನಾಗರಿಕ, ಅಸಹ್ಯ ಮತ್ತು ಸ್ವೀಕಾರಕ್ಕೆ ಅರ್ಹವಲ್ಲದ್ದು’ ಎಂದು ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ತಿಳಿಸಿದ್ದಾರೆ.

ಪ್ರಾದೇಶಿಕ ಕ್ಯಾಬಿನೆಟ್ ನಿರ್ಧರಿಸಿದ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಅಡ್ಡಿಯಾಗಿದ್ದಾರೆ ಎಂದು ಕಿರಣ್ ಬೇಡಿ ಆರೋಪಿಸಿದ್ದರಿಂದ ಮುಖ್ಯಮಂತ್ರಿ ಅವರನ್ನು ರಾಕ್ಷಸಿ ಎಂದು ಕರೆದಿದ್ದರು.

ವಾಟ್ಸ್‌ಆ್ಯಪ್‌ನಲ್ಲಿ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಿರಣ್‌ ಬೇಡಿ, ‘ರಾಕ್ಷಸರು ಎಲ್ಲರ ಒಳಿತಿಗಾಗಿ ಕೆಲಸ ಮಾಡುವುದಿಲ್ಲ. ರಾಕ್ಷಸರು ಸ್ವಾರ್ಥ ಬಯಸುತ್ತಾರೆ ಮತ್ತು ಜನರನ್ನು ಹೆದರಿಸುತ್ತಾರೆ’ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

ಇಂದಿರಾ ಗಾಂಧಿಯವರ 35 ನೇ ಪುಣ್ಯಸ್ಮರಣೆ ಸಭೆಯಲ್ಲಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.